ಚೆಕ್ ಪೋಸ್ಟ್ ನಲ್ಲಿ 3 ಬ್ಯಾರಿಕೇಡ್ ಗಳನ್ನು ಹೊಡೆದುರುಳಿಸಿದ ಟೆಂಪೋ ಟ್ರಾವೆಲರ್- ತಪ್ಪಿದ ಭಾರೀ ಅನಾಹುತ!

ಉಡುಪಿ: ಜಿಲ್ಲೆ ಹೆಬ್ರಿ ತಾಲೂಕಿನ ಸೋಮೇಶ್ವರದ ಚೆಕ್ ಪೋಸ್ಟ್ ನಲ್ಲಿ ಬ್ರೇಕ್ ಫೇಲ್ ಆದ ಟೆಂಪೋ ಟ್ರಾವೆಲರ್ ಬ್ಯಾರಿಕೇಡ್‍ಗಳನ್ನು ಹೊಡೆದುರುಳಿಸಿದ್ದರಿಂದ ಕೂದಲೆಳೆ ಅಂತರದಲ್ಲಿ ಭಾರೀ ಅವಘಡವೊಂದು ತಪ್ಪಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಹಾಕಲಾಗಿತ್ತು. ಪೊಲೀಸರು ಮತ್ತು ಬಿಎಸ್‍ಎಫ್, ಸಿಆರ್ ಪಿಎಫ್ ಯೋಧರ ತಂಡ ಚೆಕ್‍ಪೋಸ್ಟ್ ನಲ್ಲಿ ಕಾವಲು ಕಾಯುತ್ತಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ನುಗ್ಗಿದ ಟಿಟಿ ಎದುರಿಗಿದ್ದ ಮೂರು ಬ್ಯಾರಿಕೇಡ್ ಗಳಿಗೆ ಡಿಕ್ಕಿ ಹೊಡೆದಿದೆ.

ತಪಾಸಣೆ ನಡೆಸುತ್ತಿದ್ದ ಪೊಲೀಸರು ಮತ್ತು ಯೋಧರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಸಾಲಾಗಿ ನಿಂತಿದ್ದ ಕಾರುಗಳು ಎಡಬಲಕ್ಕೆ ಹೋಗಿದೆ. ಎಲ್ಲವೂ ನಾಲ್ಕೈದು ಸೆಕೆಂಡುಗಳಲ್ಲಿ ಮುಗಿದು ಹೋಗಿದೆ. ಅಲ್ಲಿದ್ದ ಜನ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಅರೆಕ್ಷಣ ಏನಾಗಿದೆ ಎನ್ನುವುದು ತಿಳಿಯಲಿಲ್ಲ.

ಹಾಸನ ಕಡೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ವಾಹನಕ್ಕೆ ಇಳಿಜಾರಿನಲ್ಲಿ ಬ್ರೇಕ್ ಬೀಳಲಿಲ್ಲ. ಎಷ್ಟೇ ಪ್ರಯತ್ನ ಪಟ್ಡರೂ ವಾಹನ ಹತೋಟಿಗೆ ತರಲು ಚಾಲಕ ಪ್ರಯತ್ನಿಸಿದ್ದಾನೆ. ಸುಮಾರು ನೂರು ಮೀಟರ್ ದೂರ ಹೋಗಿ ವಾಹನ ಹತೋಟಿಗೆ ಬಂದಿದೆ. ಚಾಲಕ ತನ್ನ ಚಾಕಚಕ್ಯತೆಯಿಂದ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ. ಅದೃಷ್ಟವಷಾತ್ ವಾಹನದಲ್ಲಿ ಇದ್ದವರಿಗೆ, ಭದ್ರತಾ ಸಿಬ್ಬಂದಿಗೆ ಸಮಸ್ಯೆಯಾಗಿಲ್ಲ. ಕಾರ್ ಸೇಫ್ ಆಗಿದೆ.

Comments

Leave a Reply

Your email address will not be published. Required fields are marked *