ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ

– ಪತಿಗೆ ಫೋಟೋ ಕಳುಹಿಸುತ್ತೇನೆ ಎಂದು ಬೆದರಿಕೆ
– ಕುಡಿದ ಜ್ಯೂಸ್‍ನಲ್ಲಿ ಇತ್ತು ಮತ್ತಿನ ಮದ್ದು

ಚೆನ್ನೈ: ಪತ್ನಿ ನೆರವಿನಿಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಆರೋಪಿ ಮತ್ತು ಆತನ ಹೆಂಡತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

RAPE CASE

ಸ್ವಯಂಘೋಷಿತ ದೇವಮಾನವ ಸತ್ಯನಾರಾಯಣನ್ ಮತ್ತು ಆತನ ಪತ್ನಿ ಪುಷ್ಪಲತಾ ಆರೋಪಿಳು. ನಗರದ ಶಿರಡಿಪುರಂ ಸರ್ವ ಶಕ್ತಿ ಪೀಠದ ಸಾಯಿಬಾಬಾ ಕೊಯಿಲ್ ಎಂಬ ದೇವಸ್ಥಾನ ಇದೆ. ಪೊಲೀಸರು ಹೇಳುವ ಪ್ರಕಾರ, ಪುಷ್ಪಲತಾ ಬಾಲಕಿ ಮೇಲೆ ಅತ್ಯಾಚಾರ ಮಾಡಲು ಪತಿ ಸತ್ಯ ನಾರಾಯಣನ್‍ಗೆ ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಮತಾಂತರ ತಡೆ ಮಸೂದೆಗೆ ವಿರೋಧ ಇದೆ: ಸಿದ್ದರಾಮಯ್ಯ

ನಡೆದಿದ್ದೇನು?: ಪಿಯುಸಿ ಓದುತ್ತಿದ್ದಾಗ ಬಾಲಕಿಯ ಸಂಬಂಧಿಕರು ಆಕೆಯನ್ನು ಆಶ್ರಮಕ್ಕೆ ಕರೆದೊಯ್ದಿದ್ದರು. ಆಗ ಪವಿತ್ರ ಬೂದಿಯನ್ನು ನೀಡಲು ಬಾಲಕಿಯನ್ನು ಕೋಣೆಯೊಳಗೆ ಕರೆದು ಪುಷ್ಪಲತಾ, ಕುಡಿಯಲು ಜ್ಯೂಸ್ ಕೊಟ್ಟಿದ್ದಾಳೆ. ಸುಮಾರು ಎರಡು ಗಂಟೆಗಳ ನಂತರ ಬಾಲಕಿಗೆ ಪ್ರಜ್ಞೆ ಬಂದಾಗ ತನ್ನ ಮೇಲೆ ಅತ್ಯಾಚಾರ ಆಗಿರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ.  ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

ಸಂತ್ರಸ್ತೆಯ ಮೇಲೆ ಪಾಪದ ಹೊರೆ ಇದೆ. ಆಕೆಯನ್ನು ಅದರಿಂದ ಮುಕ್ತಗೊಳಿಸಬೇಕು ಎಂದು ಹೇಳಿ ಬಾಲಕಿ ಮೇಲೆ ಸತ್ಯನಾರಾಯಣನ್ ನಿರಂತರ ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಗೆ ಫೋಟೋಗಳನ್ನು ತೋರಿಸಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಹೆದರಿದ ಬಾಲಕಿ ಈ ವಿಚಾರವನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದಾಳೆ.

2018 ರಲ್ಲಿ ಸಂತ್ರಸ್ತೆ ವಿವಾಹವಾಗಿ ತನ್ನ ಪತಿಯೊಂದಿಗೆ ವಿದೇಶಕ್ಕೆ ಹೋಗಿ ವಾಸವಾಗಿದ್ದಳು. 2020ರಲ್ಲಿ ಮತ್ತೆ ತನ್ನ ಆಟ ಆರಂಭಿಸಿದ ಸತ್ಯ ನಾರಾಯಣನ್, ಮಹಿಳೆಯನ್ನು ಪತ್ತೆ ಹಚ್ಚಿದ್ದಾನೆ. ಆಕೆಗೆ ಮತ್ತೆ ಕರೆ ಮಾಡಿ ಆಶ್ರಮಕ್ಕೆ ಬರುವಂತೆ ಒತ್ತಾಯಿಸಿದ್ದಾನೆ. ಬರದಿದ್ದರೆ ನಿನ್ನ ಪತಿಗೆ ಫೋಟೋಗಳನ್ನು ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿ ಮಹಿಳೆಯನ್ನು ಕರೆಸಿಕೊಂಡು ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ.

ಜುಲೈ 2020 ರಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಕೊಂಡ ಸತ್ಯನಾರಾಯಣನ್ ಮತ್ತು ಆತನ ಹೆಂಡತಿ ಸಂತ್ರಸ್ತೆಗೆ ಗರ್ಭಪಾತ ಮಾಡಿಸುವಂತೆ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ಮನನೊಂದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ 2021ರ ಜನವರಿಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಸಂತ್ರಸ್ತೆಯ ಪತಿ ಕುಟುಂಬವನ್ನು ಭೇಟಿ ಮಾಡಿ ನವೆಂಬರ್‌ನಲ್ಲಿ ಮತ್ತೆ ವಿದೇಶಕ್ಕೆ ಮರಳಿದ್ದಳು.

ಕಾಮುಕ ಸತ್ಯನಾರಾಯಣನ್ ಮತ್ತೆ ಸಂತ್ರಸ್ತೆಗೆ ತನ್ನನ್ನು ಭೇಟಿ ಮಾಡುವಂತೆ ಒತ್ತಾಯಿಸಿದ್ದ. ಈ ವಿಚಾರವಾಗಿ ಮನನೊಂದಿದ್ದ ಸಂತ್ರಸ್ತೆ ಪತಿಗೆ ಮಾಹಿತಿ ನೀಡಿದ್ದಾಳೆ. ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸತ್ಯನಾರಾಯಣನ್ ಮತ್ತು ಆತನ ಪತ್ನಿ ವಿರುದ್ಧವಾಗಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸತ್ಯನಾರಾಯಣನ್ ಮತ್ತು ಆತನ ಪತ್ನಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *