ದೇವಸ್ಥಾನದ ಪೂಜಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ- ವಿಡಿಯೋ ವೈರಲ್!

ಭುವನೇಶ್ವರ: ದೇವಸ್ಥಾನದ ಪೂಜಾರಿಯೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಆಕೆ ಜೊತೆ ಅಸಭ್ಯವಾಗಿ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಸರೋಜ್ ಕುಮಾರ್ ಡಾಶ್ ಮಹಿಳೆ ಜೊತೆ ಅಸಭ್ಯವಾಗಿ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೂಜಾರಿ. ಸರೋಜ್ ಕುಮಾರ್ ಮಹಿಳೆಯ ಚಿನ್ನವನ್ನು ಅಡವಿಟ್ಟು ಆಕೆಗೆ ಹಣ ನೀಡುವುದಾಗಿ ಹೇಳಿ ಮಹಿಳೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ.

ಸರೋಜ್ ಕುಮಾರ್ ಮಾತನ್ನು ನಂಬಿದ ಮಹಿಳೆ ಹಣ ಪಡೆಯಲು ತನ್ನ ಚಿನ್ನಭಾರಣವನ್ನು ಅಡವಿಡಲು ಆತನ ಮನೆಗೆ ತೆಗೆದುಕೊಂಡು ಹೋಗಿದ್ದಳು. ಮನೆಗೆ ಬಂದ ಮಹಿಳೆಗೆ ಸರೋಜ್ ಕುಮಾರ್ ಮತ್ತು ಬರುವ ಔಷಧಿಯನ್ನು ಜ್ಯೂಸಿನಲ್ಲಿ ಹಾಕಿ ಆಕೆಗೆ ನೀಡಿದ್ದನು ಎಂದು ವರದಿಯಾಗಿದೆ.

                                      ಕೃಪೆ: ಕಳಿಂಗ

ಮಹಿಳೆ ಆ ಜ್ಯೂಸನ್ನು ಕುಡಿದ ಮೇಲೆ ಪ್ರಜ್ಞೆ ತಪ್ಪಿ ಬಿದಿದ್ದಾಳೆ. ಆಗ ಸರೋಜ್ ಕುಮಾರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಅದ್ದನ್ನು ತನ್ನ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಸರೋಜ್ ಕುಮಾರ್ ಆ ವಿಡಿಯೋವನ್ನು ಮಹಿಳೆಗೆ ತೋರಿಸಿ ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಬ್ಲಾಕ್‍ಮೇಲ್ ಮಾಡುತ್ತಿದ್ದನು. ಆದರೆ ಮಹಿಳೆ ಅದಕ್ಕೆ ಒಪ್ಪಲಿಲ್ಲ. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೂಜಾರಿ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಆರೋಪಿ ಸರೋಜ್ ಕುಮಾರ್ ಮಹಿಳೆ ಜೊತೆ ತೆಗೆದ ಅಸಭ್ಯ ವಿಡಿಯೋವನ್ನು ಆಕೆಯ ಪತಿ, ಸ್ನೇಹಿತರಿಗೆ ಹಾಗೂ ಆಕೆಯ ಸಂಬಂಧಿಕರಿಗೆ ಫೇಸ್‍ಬುಕ್ ಮತ್ತು ವಾಟ್ಸಾಪ್ ಮೂಲಕ ಕಳುಹಿಸಿದ್ದನು. ಸದ್ಯ ಪೊಲೀಸರು ಮಹಿಳೆಯ ದೂರು ಆಧರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ವಿನ್ನರ್ ಯುವತಿಯ ಸೆಕ್ಸ್ ವಿಡಿಯೋ ವೈರಲ್!

Comments

Leave a Reply

Your email address will not be published. Required fields are marked *