ಬಾಹುಬಲಿ ಪ್ರಭಾಸ್‌ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

ತೆಲುಗಿನ ಖ್ಯಾತ ನಟ, ಸದ್ಯ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್ ಸಿನಿಮಾ ಮಾಡುತ್ತಿರುವ ಪ್ರಭಾಸ್ ಮದುವೆ ಬಗ್ಗೆ ಹಲವು ವರ್ಷಗಳಿಂದ ಇಡೀ ತೆಲುಗು ಇಂಡಸ್ಟ್ರಿ ತಲೆ ಕೆಡಿಸಿಕೊಂಡಿತ್ತು. ಪ್ರಭಾಸ್ ಎಲ್ಲಿಗೆ ಹೋಗಲಿ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಯಾಕೆ ಜನರು ತನ್ನ ಮದುವೆಯ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಎಂದು ಸ್ವತಃ ಪ್ರಭಾಸ್ ಹೇಳಿಕೆ ನೀಡಿದ್ದರು. ಕೊನೆಗೂ ಈಗ ಅವರ ಮದುವೆಯ ಬಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.

ಪ್ರಭಾಸ್ ಪಾಲಕರು ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಿದ್ದು, ಮನೆಯವರು ಆಯ್ಕೆ ಮಾಡಿದ ಹುಡುಗಿಯನ್ನೇ ಅವರು ಮದುವೆ ಆಗಲಿದ್ದಾರಂತೆ. ಹುಡುಗಿ ಸಿನಿಮಾ ರಂಗದವರು ಅಲ್ಲ ಎನ್ನುವ ಸುಳಿವನ್ನೂ ಅವರು ನೀಡಿದ್ದಾರೆ. ಹಾಗಾಗಿ ಪ್ರಭಾಸ್ ಮತ್ತು ಹಲವು ನಟಿಯರ ಸಂಬಂಧದ ಬಗೆಗಿನ ಗಾಸಿಪ್ ಗೂ ಕೂಡ ಅವರು ತೆರೆ ಎಳೆದಿದ್ದಾರೆ. ಸಿನಿಮಾ ರಂಗಕ್ಕೆ ಸಂಬಂಧವೇ ಪಡದ ಹುಡುಗಿಯೊಂದಿಗೆ ಪ್ರಭಾಸ್ ಸಪ್ತಪದಿ ತುಳಿಯಲಿದ್ದಾರೆ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

ಪ್ರಭಾಸ್ ಮತ್ತು ಹಲವು ನಟಿಯರ ಲವ್ವಿ ಡವ್ವಿ ಕಥೆಗಳು ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದ್ದವು. ಅದರಲ್ಲೂ ಅನುಷ್ಕಾ ಜೊತೆ ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನುವ ಗಾಸಿಪ್ ಕೂಡ ಇತ್ತು. ಸಿನಿಮಾ ರಂಗದವರನ್ನೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಈ ವರ್ಷದ ಒಳಗೆ ಪ್ರಭಾಸ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವತಃ ಪ್ರಭಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೂಡ ಇದನ್ನು ಖಚಿತ ಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *