ಹೈದರಾಬಾದ್: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಶನಿವಾರ ಮುಂಜಾನೆ ದೆಹಲಿ-ಹೈದರಾಬಾದ್ ವಿಮಾನದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಯಾಣಿಕನಿಗೆ ಗೋಲ್ಡನ್ ಅವರ್ ಚಿಕಿತ್ಸೆ ನೀಡಿದರು.
ರಾಜಕೀಯ ಪ್ರವೇಶಿಸುವ ಮೊದಲು ವೈದ್ಯರಾಗಿದ್ದ ಸೌಂದರರಾಜನ್, ಪ್ರಯಾಣಿಕನಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯನ್ನು ಕೊಟ್ಟು ಸಹಾಯಕ ಔಷಧಿಗಳನ್ನು ನೀಡಿದರು. ಇದರಿಂದ ಸಹ-ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದ್ದು, ಧನ್ಯವಾದವನ್ನು ಹೇಳಿದ್ದಾರೆ. ಈ ಕುರಿತು ರವಿ ಚಂದರ್ ನಾಯ್ಕ ಮುದವತ್ ಅವರು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಳ್ಳೆಯದಾಗಬೇಕೆಂದ್ರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ: ಜಮೀರ್
https://twitter.com/iammrcn/status/1550614073124933633?ref_src=twsrc%5Etfw
ನಡೆದಿದ್ದೇನು?
ಸೌಂದರರಾಜನ್ ಅವರು ವಾರಣಾಸಿಯಿಂದ ನವದೆಹಲಿ ಮೂಲಕ ಹೈದರಾಬಾದ್‍ಗೆ ಹಿಂದಿರುಗುತ್ತಿದ್ದಾಗ ವಿಮಾನ ಸಿಬ್ಬಂದಿ ನೀಡಿದ ಪ್ರಕಟಣೆಗೆ ಪ್ರತಿಕ್ರಿಯಿಸಿದರು. ಸಹ-ಪ್ರಯಾಣಿಕನಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಸೌಂದರರಾಜನ್ ಅವರು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದು, ವಿಮಾನ ನಿಲ್ದಾಣಕ್ಕೆ ಬಂದ ನಂತರ ಚಿಕಿತ್ಸೆ ಪಡೆದ ಪ್ರಯಾಣಿಕರನ್ನು ಗಾಲಿಕುರ್ಚಿಯಲ್ಲಿ ವಿಮಾನ ನಿಲ್ದಾಣದ ವೈದ್ಯಕೀಯ ಬೂತ್‍ಗೆ ಕರೆದೊಯ್ಯಲಾಯಿತು.

ಸೌಂದರರಾಜನ್ ಅವರು ಇತ್ತೀಚೆಗೆ ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಎಡೆಬಿಡದ ಮಳೆ ಮತ್ತು ಕೆಸರಿನಲ್ಲಿಯೇ ನಡೆದು ಪ್ರದೇಶದ ಸುತ್ತಲೂ ನಡೆದರು. ನಂತರ ಅವರು ಅಶ್ವಪುರಂ ಮಂಡಲದ ಆಶ್ರಯ ಶಿಬಿರಗಳಿಗೆ ಭೇಟಿ ನೀಡಿದ್ದು, ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದ್ದರು. ಇದನ್ನೂ ಓದಿ: ಯಡಿಯೂರಪ್ಪ ತ್ಯಾಗ ಮಾಡಿಲ್ಲ, ಅವರನ್ನ ಪಕ್ಷದಿಂದ ದಬ್ಬಿದ್ರು: ಸಿಎಂ ಇಬ್ರಾಹಿಂ
ಮೊದಲು ಅಶ್ವಪುರಂ ಮಂಡಲದ ವೇಮುಲಪಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಅವರು ನಂತರ, ಪಾಮುಲಪಲ್ಲಿಯ ಎಸ್‍ಕೆಟಿ ಫಂಕ್ಷನ್ ಹಾಲ್ ಮತ್ತು ಚಿಂತಿರಿಯಾಲ ಕಾಲೋನಿಯ ತರಿಂಗಿಣಿ ಫಂಕ್ಷನ್ ಹಾಲ್‍ನಲ್ಲಿ ಸ್ಥಾಪಿಸಲಾದ ಆಶ್ರಯ ಶಿಬಿರಗಳಿಗೆ ಭೇಟಿ ನೀಡಿದರು. ಸೌಂದರರಾಜನ್ ಅವರು ಹಾನಿಗೊಳಗಾದ ಮನೆಗಳು ಮತ್ತು ಜಲಾವೃತಗೊಂಡ ಭತ್ತದ ಗದ್ದೆಗಳಿಗೆ ಭೇಟಿ ನೀಡಿದ್ದರು.

Leave a Reply