ಬಿಗ್‍ಬಾಸ್ ಸೀಸನ್-15ರ ವಿನ್ನರ್ ಪಟ್ಟ ಗಿಟ್ಟಿಸಿಕೊಂಡ ನಟಿ ತೇಜಸ್ವಿ ಪ್ರಕಾಶ್

ಮುಂಬೈ: ನಾಲ್ಕು ತಿಂಗಳಿನಿಂದ ವೀಕ್ಷಕರನ್ನು ರಂಜಿಸಿದ್ದ ಹಿಂದಿ ಬಿಗ್‍ಬಾಸ್ ಸೀಸನ್-15ಕ್ಕೆ ತೆರೆ ಬಿದ್ದಿದೆ. ಬಿಗ್‍ಬಾಸ್ ಸೀಸನ್-15 ಟ್ರೋಫಿಯನ್ನು ನಟಿ ತೇಜಸ್ವಿ ಪ್ರಕಾಶ್ ಮುಡಿಗೇರಿಸಿಕೊಂಡಿದ್ದಾರೆ.

ಸ್ವರಗಿಣಿ ಸಿರಿಯಲ್ ಮೂಲಕ ಖ್ಯಾತಿ ಪಡೆದಿದ್ದ ನಟಿ ತೇಜಸ್ವಿ ಪ್ರಕಾಶ್ ಬಿಗ್‍ಬಾಸ್-15ರ ಟ್ರೋಫಿ ಹಾಗೂ 40 ಲಕ್ಷ ರೂ. ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ತೇಜಸ್ವಿ ಪ್ರಕಾಶ್ ಬಿಗ್‍ಬಾಸ್ ಸೀಸನ್-15ರ ಸ್ಟ್ರಾಂಗ್ ಕಂಟೆಸ್ಟೆಟ್‍ಗಳಲ್ಲಿ ಒಬ್ಬರಾಗಿದ್ದು, ಹೀಗಾಗಿ ಸಲ್ಮಾನ್‍ಖಾನ್ ಅವರ ಹೆಸರನ್ನು ಘೋಷಿಸಿದಾಗ ಎಲ್ಲರಿಗೂ ಅಚ್ಚರಿಯೇನಾಗಲಿಲ್ಲ. ವೇದಿಕೆ ಮೇಲೆ ಟ್ರೋಫಿ ಗೆದ್ದ ತೇಜಸ್ವಿ ಪ್ರಕಾಶ್ ಇದೇ ಖುಷಿಯಲಿ ಟ್ರೋಫಿಯನ್ನು ತಮ್ಮ ಎರಡು ಕೈಗಳಿಂದ ಬಾಚಿ ತಬ್ಬಿಕೊಂಡು ತಮ್ಮ ಅಭಿಪ್ರಾಯಗಳನ್ನು ಹೇಳಲು ಆರಂಭಿಸಿದರು. ಇದನ್ನೂ ಓದಿ: ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ

ನಾನು ಬಿಗ್ ಬಾಸ್ ಮನೆಗೆ ಪ್ರವೇಶಿಸಿದಾಗ, ಆರಂಭದಲ್ಲಿ ಎಲ್ಲವೂ ಕನಸಿನಂತೆ ಕಾಣುತ್ತಿತ್ತು. ಆದರೆ ನಾನು ಆಟ ಆಡಲು ಆರಂಭಿಸಿದಾಗ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಾ ಹೋದೆ. ಆಟದಲ್ಲಿ ಸಂಪೂರ್ಣವಾಗಿ ನನ್ನನ್ನು ತೊಡಗಿಸಿಕೊಂಡೆ ಮತ್ತು ಇಂದು ನಾನು ಹಿಂತಿರುಗಿ ನೋಡಿದಾಗ ಬಿಗ್‍ಬಾಸ್ ಮನೆಯ ಜರ್ನಿ ಒಂದು ಅದ್ಭುತವಾದಂತಹ ಜರ್ನಿಯಾಗಿದೆ. ಕೊನೆಗೂ ಟ್ರೋಫಿ ಗೆದ್ದಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಬಿಗ್‍ಬಾಸ್ ಮನೆಯಿಂದ ನಾನು ನಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವ ನಿಜವಾದ ಬಹುಮಾನ ಎಂದರೆ ಕಲಿಕೆ ಮತ್ತು ಅನುಭವಗಳು. ನನ್ನನ್ನು ನಂಬಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಸಲ್ಮಾನ್ ಖಾನ್ ಅವರು ನೀಡಿದ ಬೆಂಬಲಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಕಲರ್ಸ್ ತಂಡ ಮತ್ತು ನನಗೆ ಬೇರೂರಿರುವ ಮತ್ತು ಈ ಪ್ರಯಾಣವನ್ನು ಸ್ಮರಣೀಯವಾಗಿಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಎಂದು ಹೇಳಿದರು.

Tejasswi Prakash

ತೇಜಸ್ವಿ ಪ್ರಕಾಶ ಅವರು ಬಿಗ್‍ಬಾಸ್ ಸೀಸನ್-15 ರ ಮನೆಯ ಹೊರಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿಲ್ಸಿಲಾ ಬದಲ್ಟೆ ರಿಶ್ಟನ್ ಕಾ 2ನಲ್ಲಿ ಕಾಣಿಸಿಕೊಂಡಿರುವ ಅವರು ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ. ಬಿಗ್‍ಬಾಸ್ ಸೀಸನ್-15ಕ್ಕೆ ಎಂಟ್ರಿ ಕೊಟ್ಟ ಬಳಿಕ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಹಾಲಿವುಡ್ ನಟನಿಗೆ ಪರಿಚಯ ಮಾಡಿಕೊಂಡ ಸಲ್ಲು

Comments

Leave a Reply

Your email address will not be published. Required fields are marked *