ಸಚಿವ ಅನಂತ್‍ಕುಮಾರ್ ಹೆಗ್ಡೆಗೆ ವಾದ್ರಾ ಸಹೋದರಿ ಪತಿ ಚಾಲೆಂಜ್

ನವದೆಹಲಿ: ಹಿಂದೂ ಹುಡುಗಿಯ ಮೈ ಮುಟ್ಟಿದ ಕೈ ಇರಬಾರದು ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರ ಹೇಳಿಕೆ ದೇಶದ್ಯಾಂತ ಭಾರೀ ಸದ್ದು ಮಾಡಿದ್ದು, ಇದೀಗ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸಹೋದರಿಯ ಪತಿ, ಕಾಂಗ್ರೆಸ್ ನಾಯಕ ತೆಹಸೀನ್ ಪೂನವಾಲಾ ಸಚಿವರಿಗೆ ಚಾಲೆಂಜ್ ಹಾಕಿದ್ದಾರೆ.

ನಾನು ನನ್ನ ಹಿಂದೂ ಜೀವನ ಸಂಗಾತಿಯ ಮೈ ಮುಟ್ಟಿದ್ದೇನೆ. ಇದೀಗ ನನ್ನನ್ನು ನೀವೇನು ಮಾಡುತ್ತೀರಿ ಎಂದು ಫೋಟೋ ಸಮೇತ ಸಚಿವರಿಗೆ ಟ್ವೀಟ್ ಮೂಲಕ ಚಾಲೆಂಜ್ ಹಾಕಿದ್ದಾರೆ.

ಟ್ವೀಟ್ ನಲ್ಲೇನಿದೆ..?
”ಶುಭ ಮಧ್ಯಾಹ್ನ ಅನಂತ್ ಕುಮಾರ್ ಹೆಗ್ಡೆಯವರೇ.. ನೋಡಿ ನನ್ನ ಕೈಗಳು ನನ್ನ ಹಿಂದೂ ಹೆಣ್ಣನ್ನು ಟಚ್ ಮಾಡಿವೆ. ಇದೀಗ ನೀವು ನನ್ನನ್ನು ಏನು ಮಾಡುತ್ತೀರಿ. ಇದು ನನ್ನ ಚಾಲೆಂಜ್ ಸರ್” ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಹೆಗ್ಡೆ ಹೇಳಿದ್ದೇನು..?
ಜಾತಿ ವಿಷಬೀಜ ಸಮಾಜದಲ್ಲಿ ಸೇರಿಕೊಂಡ ಬಳಿಕ ನಾವು ನಿರ್ಮಾಣ ಮಾಡಿದ್ದನ್ನು ನಮ್ಮದು ಎಂದು ಹೇಳಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ನಿಲ್ಲದೇ ಇದ್ದರೆ ಏನಾಗುತ್ತದೆ ಎಂಬುವುದನ್ನು ಇತಿಹಾಸ ನೋಡಿದರೆ ನಮಗೆ ಅರಿವಾಗುತ್ತದೆ. ಆದ್ದರಿಂದ ಜಾತಿ ಪ್ರಶ್ನೆ ಇಲ್ಲದೆ ಹಿಂದೂ ಹುಡುಗಿಯ ಮುಟ್ಟಿದರೆ ಆ ಕೈ ಇರಬಾರದು ಎಂದು ಮಡಿಕೇರಿಯಲ್ಲಿ ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಾಮಾಜಿಕ ಸಮರಸತಾ ಸಮಾವೇಶ, ಹಿಂದೂ ಐಕ್ಯ ಸಮ್ಮೇಳನದಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದರು.

https://www.youtube.com/watch?v=sZnllwvVLOs

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *