ಟರ್ಕಿ: 16 ವರ್ಷದ ಬಾಲಕನೊಬ್ಬ ತನ್ನ 13ರ ಗರ್ಲ್ ಫ್ರೆಂಡ್‍ಗೆ ಕಿಸ್ ಕೊಟ್ಟಿದ್ದಕ್ಕೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಕರಣವೊಂದು ಟರ್ಕಿಯಲ್ಲಿ ನಡೆದಿದೆ.
ಬಾಲಕ ಶಾಲೆ ಆವರಣದಲ್ಲಿಯೇ ತನ್ನ ಗೆಳತಿಯನ್ನು ಅಪ್ಪಿಕೊಂಡು ಎಲ್ಲರ ಸಮ್ಮುಖದಲ್ಲೇ ಕಿಸ್ ಮಾಡಿದ್ದಾನೆ. ಇದನ್ನು ನೋಡಿದ ಆತನ ಸ್ನೇಹಿತರು ತಮ್ಮ ಮೊಬೈಲಿನಲ್ಲಿ ಆ ಪ್ರಸಂಗವನ್ನು ಸೆರೆ ಹಿಡಿದಿದ್ದಾರೆ. ನಂತರ ಆ ವಿಡಿಯೋವನ್ನು ಬೇರೆಯವರಿಗೆ ಶೇರ್ ಮಾಡಿ ವೈರಲ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಆ ಶಾಲೆಯ ಶಿಕ್ಷಕಿ ಬಾಲಕನ ಕಿಸ್ಸಿಂಗ್ ವೈರಲ್ ವಿಡಿಯೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕನ ವಿರುದ್ಧ ಕಾನೂನು ಕ್ರಮಗೈಕೊಂಡಿದ್ದಾರೆ. ಟರ್ಕಿಯಲ್ಲಿ ಈ ರೀತಿ ಮಾಡಿದರೆ ಅದು ಅಪರಾಧವಾಗುತ್ತದೆ. ಸದ್ಯ ಕೋರ್ಟ್ ಬಾಲಕನಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಪೊಲೀಸರು ಬಾಲಕನನ್ನು ಹಿಡಿದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಬಾಲಕನಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಈ ವಿಡಿಯೋ ಸೆರೆ ಹಿಡಿದ 5 ವಿದ್ಯಾರ್ಥಿಗಳನ್ನು ಕೂಡ ಆರೋಪಿಗಳು ಎಂದು ಹೇಳಲಾಗುತ್ತಿದೆ. ಸದ್ಯ ಆ ಐವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ.
ಸದ್ಯ ವಕೀಲರು ಮುಖ್ಯ ಆರೋಪಿ ಆ ಬಾಲಕನನ್ನು ಶಿಕ್ಷೆಯಿಂದ ತಪ್ಪಿಸಲು ಪ್ರಯತ್ನಿಸಿದ್ದರು. ಈ ಮೊದಲು ಬಾಲಕನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ಹಾಗಾಗಿ ಬಾಲಕನಿಗೆ ಸಾಧಾರಣ ಶಿಕ್ಷೆ ವಿಧಿಸಬೇಕೆಂದು ವಕೀಲರು ಕೋರ್ಟ್‍ನಲ್ಲಿ ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply