ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ನೋಡಿ ಬೆಚ್ಚಿ ಬಿದ್ದ ಸಂಬಂಧಿಕರು

RAPE CASE

ಗಾಂಧಿನಗರ: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ 6 ಮಂದಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇತ್ತೀಚೆಗಷ್ಟೇ ಬಾಲಕಿಯ ಸಂಬಂಧಿಕರು ಈ ವೀಡಿಯೋವನ್ನು ಕಂಡು ಗಾಬರಿಯಾಗಿದ್ದಾರೆ. ಈ ವೀಡಿಯೋವನ್ನು ಆರೋಪಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾ ಫ್ಲಾಟ್‍ಫಾರ್ಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾನೆ.

ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ಅಹ್ವಾ ತಾಲೂಕಿನಲ್ಲಿ ಬಾಲಕಿಯ ಮೇಲೆ ಮೊದಲು ಆಕೆಯ ಸ್ನೇಹಿತ ಅತ್ಯಾಚಾರವೆಸಗಿದ್ದಾನೆ. ಬಳಿಕ ದಾರಿಯಲ್ಲಿ ಕಾಯುತ್ತಿದ್ದ ಆತನ ಎಂಟು ಮಂದಿ ಸ್ನೇಹಿತರು ಬಾಲಕಿಯನ್ನು ಬಲವಂತವಾಗಿ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎನ್. ಎಚ್ ಸವ್ಸೆತಾ ತಿಳಿಸಿದ್ದಾರೆ. ಇದನ್ನೂ ಓದಿ: 7ರ ಬಾಲಕಿ ಮೇಲೆ ಅತ್ಯಾಚಾರ- ಹತ್ಯೆಗೈದವರಿಗಾಗಿ ಶೋಧ ಕಾರ್ಯ

ಅತ್ಯಾಚಾರ ವೆಸಗಿದ ಬಳಿಕ ಬಾಲಕಿಗೆ ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಭಯಗೊಂಡ ಬಾಲಕಿ ಸುಮಾರು ಎರಡು ತಿಂಗಳು ಮೌನವಾಗಿದ್ದಳು. ಆದರೆ ಇತ್ತೀಚೆಗಷ್ಟೇ ಆಕೆಯ ಸಂಬಂಧಿಕರೊಬ್ಬರು ಈ ವೀಡಿಯೋ ನೋಡಿ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಪ್ರಕರಣದ ಎಲ್ಲಾ ಆರೋಪಿಗಳನ್ನು ಡಿಸೆಂಬರ್ 24ರಂದು ಬಂಧಿಸಲಾಗಿದ್ದು, ಅವರಲ್ಲಿ ಮೂವರು ಅಪ್ರಾಪ್ತ ಬಾಲಕರಾಗಿರುವ ಕಾರಣ ಅವರಿಗೆ ಜಾಮೀನು ದೊರೆತಿದೆ. ಇನ್ನೂ ಉಳಿದ ಆರು ಮಂದಿ ನ್ಯಾಯಾಲಯ ಪೊಲೀಸ್ ರಿಮಾಂಡ್ ರೂಮ್‍ಗೆ ಕಳುಹಿಸಿದೆ. ಇದನ್ನೂ ಓದಿ: ಪತ್ನಿಯ ಅನೈತಿಕ ಸಂಬಂಧ – ಮನನೊಂದು ರೈಲ್ವೆ ಹಳಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ! 

ಇದೀಗ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಪೋಕ್ಸೋ ಕಾಯ್ದೆ, 376 (ಡಿ) (ಎ) ಸಾಮೂಹಿಕ ಅತ್ಯಾಚಾರ, 506 (2) ಕ್ರಿಮಿನಲ್ ಬೆದರಿಕೆ, 120 (ಬಿ) ಕ್ರಿಮಿನಲ್ ಪಿತೂರಿ ಮತ್ತು 114 ಪ್ರಚೋದಕ ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *