ಬಾವನಿಗಾಗಿ 7 ತಿಂಗಳ ಗರ್ಭಿಣಿ ಸೋದರಿಯನ್ನೇ ಕೊಂದಳು

ಭೋಪಾಲ್: 19 ವರ್ಷದ ಸಹೋದರಿಯೊಬ್ಬಳು ತನ್ನ ಬಾವನನ್ನು ಮದುವೆಯಾಗಲು ಸ್ವಂತ ಅಕ್ಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

ಅಭಿಲಾಷಾ ಕೊಲೆಯಾದ ಸಹೋದರಿ. ಈ ಘಟನೆ ಜಬಲ್ಪುರದ ಕೈಥಾಲಾದಲ್ಲಿ ನಡೆದಿದೆ. ಆರೋಪಿ ಸಾಕ್ಷಿ ಅಕ್ಕನ ಪತಿಯನ್ನು ವಿವಾಹವಾಗಲು 7 ತಿಂಗಳ ಗರ್ಭಿಣಿಯಾಗಿದ್ದ ತನ್ನ ಸೋದರಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಬಾತ್‍ರೂಮಿನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ. ಅದೇ ಜಾಗದಲ್ಲಿ ಕೃತ್ಯಕ್ಕೆ ಬಳಸಲಾಗಿದ್ದ ಚಾಕು ಕೂಡ ಪತ್ತೆಯಾಗಿದೆ ಎಂದು ಶಾಪುರಾ ಪೊಲೀಸರು ತಿಳಿಸಿದ್ದರು. ಈ ಕುರಿತು ತನಿಖೆ ನಡೆಸಿದಾಗ ಮುಖದ ಸುತ್ತ ಬಟ್ಟೆಯೊಂದನ್ನು ಸುತ್ತಿಕೊಂಡು ಯುವತಿಯೊಬ್ಬಳು ಬಾತ್‍ರೂಮ್‍ನಿಂದ ಹೊರಗೆ ನಡೆದುಕೊಂಡು ಹೋಗುವುದನ್ನು ನೋಡಿದ್ದೇವೆ ಎಂದು ನೆರೆಹೊರೆಯವರು ತಿಳಿಸಿದ್ದರು. ನಂತರ ಅನುಮಾನದ ಮೇರೆಗೆ ಶಹಪುರ-ನರಸಿಂಗ್‍ಪುರ ರಸ್ತೆ ಬಳಿ ಆರೋಪಿ ಸಾಕ್ಷಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಅಭಿಲಾಷಾ ಅನಾರೋಗ್ಯಕ್ಕೆ ಒಳಗಾದ ನಂತರ ನಾನು ಸಹೋದರಿಯ ಮನೆಗೆ ಹೋಗಿದ್ದೆ. ಈ ಹಿಂದೆಯೂ ನಾನು ಸಹೋದರಿಯನ್ನು ಕೊಲೆ ಮಾಡಲು ಯತ್ನಿಸಿದ್ದೆ. ಆದರೆ ನನ್ನ ಪ್ರಯತ್ನಗಳು ವಿಫಲವಾಗಿತ್ತು ಎಂದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.

ಆರೋಪಿ ಸಾಕ್ಷಿ ತನ್ನ ಬಾವ ಅನ್ಮೋಲ್ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಈ ವಿಚಾರ ಮೃತ ಅಕ್ಕನಿಗೆ ತಿಳಿದಿತ್ತು. ಆಗ ಅಭಿಲಾಷಾ ನೀನು ಇಲ್ಲಿ ಇರುವುದು ಬೇಡ ಮನೆಗೆ ಹೋಗು ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ಆಕೆಯ ಸಹೋದರ ಕೂಡ ಸಾಕ್ಷಿಯನ್ನು ಮನೆಗೆ ಕಳುಹಿಸುವಂತೆ ತಿಳಿಸಿದ್ದನು. ಇದರಿಂದ ಕೋಪಗೊಂಡ ಆರೋಪಿ ಸಾಕ್ಷಿ ಸಹೋದರಿಯನ್ನು ಕೊಲೆ ಮಾಡಿದ್ದಾಳೆ ಎಂದು ಜಿಲ್ಲಾ ಎಸ್‍ಪಿ ಆರ್.ಕೆ.ನಾರ್ವಾರಿಯಾ ಹೇಳಿದ್ದಾರೆ.

ಸದ್ಯಕ್ಕೆ ಆರೋಪಿ ಸಾಕ್ಷಿ ಹೇಳಿಕೆಯ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *