ಬೈಕ್‍ನಲ್ಲಿ ಬಂದು ಯುವತಿಯರ ಹಿಂಭಾಗಕ್ಕೆ ಹೊಡೆದು ಪರಾರಿಯಾಗ್ತಿದ್ದ ಕಾಮುಕ ಟೆಕ್ಕಿ ಅರೆಸ್ಟ್!

ಬೆಂಗಳೂರು: ರಸ್ತೆಯಲ್ಲಿ ನಿಂತಿರುವ ಯುವತಿಯರ ಹಿಂಭಾಗಕ್ಕೆ ಹೊಡೆದು ಪರಾರಿಯಾಗುತ್ತಿದ್ದ ಕಾಮುಕನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ನಗರದ ಶ್ರೀಗಂಧಕಾವಲು ನಿವಾಸಿ ವಿನೀತ್ ಬಂಧಿತ ಆರೋಪಿ. ವಿನೀತ್ ಬೈಕ್ ನಲ್ಲಿ ವೇಗವಾಗಿ ಬಂದು ರಸ್ತೆಯ ಪಕ್ಕ ನಿಂತಿರುವ ಹುಡುಗಿಯರನ್ನು ಹಿಂಬದಿಯಿಂದ ಮುಟ್ಟಿ ಪರಾರಿಯಾಗುತ್ತಿದ್ದ. ವಿನೀತ್ ಬಿಇ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಹಿಂಭಾಗಕ್ಕೆ ಹೊಡೆದು ಫ್ಲೈಯಿಂಗ್ ಕಿಸ್ ಕೊಟ್ಟ ಕಾಮುಕ! 

ಏಪ್ರಿಲ್ 10 ರಂದು ನಾಗರಭಾವಿ ಸರ್ಕಲ್ ಬಳಿ ಯುವತಿಯೊಬ್ಬರು ಊಟದ ಪಾರ್ಸೆಲ್‍ಗಾಗಿ ಕಾಯುತ್ತಾ ರಸ್ತೆಯ ಬದಿ ನಿಂತಿದ್ರು. ಈ ವೇಳೆ ಬೈಕ್‍ನಲ್ಲಿ ಬಂದ ವಿನೀತ್ ಯುವತಿಯ ಹಿಂಭಾಗ ಮುಟ್ಟಿ ಪರಾರಿಯಾಗಿದ್ದ. ಇದ್ರಿಂದ ಭಯಭೀತಳಾದ ಯುವತಿ ಪ್ರಾಂಶುಪಾಲರ ಜೊತೆ ಬಂದು ಮೇ 3ರಂದು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ: 6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಂದು, ಮನೆಯಲ್ಲೇ ಮೃತದೇಹ ಬಚ್ಚಿಟ್ಟಿದ್ದ ಕಾಮುಕ 

ಡ್ಯೂಟಿ ಬಳಿಕ ಹುಡುಗಿಯರನ್ನ ಚೇಡಿಸುತ್ತಿದ್ದ: ಖಾಸಗಿ ಕಂಪನಿಯೊಂದರಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ವಿನೀತ್ ತನ್ನ ಕೆಲಸ ಮುಗಿದ ಮೇಲೆ ರಸ್ತೆಯಲ್ಲಿ ಹೋಗುವ ಯುವತಿಯರನ್ನು ಚುಡಾಯಿಸುತ್ತಿದ್ದ ಹಾಗು ಜನಸಂದಂಣಿಯಿರುವ ಬಸ್‍ಗಳಲ್ಲಿ ಹತ್ತಿ ತನ್ನ ಲೈಂಗಿಕ ಆಸಕ್ತಿಯನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

ಮೇ 3ರಂದು ದಾಖಲಾದ ದೂರಿನ್ವಯ ಚಂದ್ರಾಲೇಔಟ್ ಪೊಲೀಸರು ನಾಗರಭಾವಿ ಬಳಿಯ ಸಿಸಿಟಿವಿ ಪರಿಶೀಲನೆ ನಡೆಸಿ, ಕಾಮುಕ ವಿನೀತ್‍ನನ್ನು ಬಂಧಿಸಿದ್ದಾರೆ. ವಿನೀತ್ ವಿರುದ್ಧ ಐಪಿಸಿ ಸೆಕ್ಷನ್ 354, ಲೈಂಗಿಕ ಕಿರಿಕುಳ ಆರೊಪದಡಿ ದೂರು ದಾಖಲಿಸಿ ನ್ಯಾಯಂಗ ಬಂಧನದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ಹೆಂಡತಿಗೆ ವಯಾಗ್ರ ಮಾತ್ರೆ ತಿನ್ನಿಸಿ ಪೀಡಿಸ್ತಿದ್ನಂತೆ ಕಾಮುಕ ಪತಿ

ಇದನ್ನೂ ಓದಿ:  ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು 

 

Comments

Leave a Reply

Your email address will not be published. Required fields are marked *