ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಬೆಂಗ್ಳೂರಿನ ಟೆಕ್ಕಿ ಆತ್ಮಹತ್ಯೆ

ಮಧುರೈ: ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ತಮಿಳುನಾಡಿನ ಜೈಹಿಂದ್‍ಪುರಂ ನಿವಾಸಿಯಾಗಿರುವ ಆರ್. ಮಿಥುನ್ ರಾಜ್(27) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಮಿಥುನ್ ಅವರು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಅವರ ಕೂದಲು ಹೆಚ್ಚು ಉದುರುತಿತ್ತು. ಈ ಸಮಸ್ಯೆಯಿಂದ ಹೊರಬರಲು ಮಿಥುನ್ ಹಲವು ಔಷಧಿಗಳನ್ನು ಸೇವಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಚೆನ್ನೈ ನ ಇನ್ಫೋಸಿಸ್ ಕಂಪನಿಯಲ್ಲಿ ಟೆಕ್ಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮಿಥುನ್ ಕೆಲ ವರ್ಷದ ಬಳಿಕ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು.

ಮಿಥುನ್ ಅವರ ತಂದೆ ರವಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ತಾಯಿ ವಸಂತಿ ಅವರು ಮಧುರೈನ ಜೈಹಿಂದ್‍ಪುರಂ ನಲ್ಲಿ ವಾಸವಾಗಿದ್ದರು. ವಸಂತಿ ಅವರು ಮಿಥುನ್ ಅವರಿಗೆ ಸೂಕ್ತ ವಧು ನೋಡಿ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಮಿಥುನ್ ತನ್ನ ಕೂದಲಿನ ಸಮಸ್ಯೆಯ ಬಗ್ಗೆ ಹೆಚ್ಚು ಆತಂಕಗೊಂಡಿದ್ದರು.

ಕುದಲು ಉದುರುವಿಕೆಯಿಂದ ನೊಂದಿದ್ದ ಮಿಥುನ್ ರಜೆಯ ಮೇಲೆ ತಾಯಿಯ ಬಳಿ ತೆರಳಿದ್ದರು. ಈ ವೇಳೆ ಹೆಚ್ಚು ಆತಂಕಗೊಂಡಿದ್ದ ಮಿಥುನ್ ರನ್ನು ಕಂಡು ವಸಂತಿ ಅವರು ಧೈರ್ಯ ತುಂಬಿದ್ದರು. ಆದರೆ ಭಾನುವಾರ ತಾಯಿ ದೇವಾಲಯಕ್ಕೆ ತೆರಳಿದ್ದ ವೇಳೆ ಮಿಥುನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾಗಿ ಟೆಕ್ಕಿ ಸಾವು- Who Killed Ragu? ಈಗ ವೈರಲ್

ಮನೆಗೆ ಹಿಂದಿರುಗಿದ ವೇಳೆ ವಸಂತಿ ಅವರು ಮಗ ಆತ್ಮಹತ್ಯೆ ಮಾಡಿಕೊಂಡಿದನ್ನು ಕಂಡು ಸ್ಥಳೀಯರ ಸಹಾಯದಿಂದ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮಿಥುನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ರಾತ್ರಿ ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿ ಬೆಳಗ್ಗೆ ಕಂಪೆನಿಯ 10 ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ

ತಮಿಳುನಾಡಿನ ಜೈಹಿಂದ್‍ಪುರಂ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *