ಸಂಬಂಧ ಮುಂದುವರಿಸುವಂತೆ ನಗ್ನ ಫೋಟೋ ಇಟ್ಕೊಂಡು ಬ್ಲ್ಯಾಕ್‍ಮೇಲ್ – ಟೆಕ್ಕಿ ಅರೆಸ್ಟ್

ಹೈದರಾಬಾದ್: ಸಂಬಂಧ ಮುಂದುವರಿಸುವಂತೆ ನಗ್ನ ಫೋಟೋ ಇಟ್ಟುಕೊಂಡು ಸ್ನೇಹಿತೆಯನ್ನು ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಟೆಕ್ಕಿಯನ್ನು ರಾಚಕೊಂಡ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆರೋಪಿ 24 ವರ್ಷದ ಟೆಕ್ಕಿ ಭಾರತ್‍ನಗರ ನಿವಾಸಿಯಾಗಿದ್ದು, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ವಾಸಿಸುವ ಬಾಲ್ಯದ ಗೆಳತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರು ಒಟ್ಟಿಗೆ ರಿಲೆಷನ್‍ಶಿಪ್‍ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಆರೋಪಿ ಟೆಕ್ಕಿ ತನ್ನ ಮೊಬೈಲಿನಲ್ಲಿ ಪ್ರೇಯಸಿಯ ನಗ್ನ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದನು.

ಕೆಲವು ತಿಂಗಳ ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದರು. ಇದಾದ ಬಳಿಕ ಯುವತಿ 2011 ರಲ್ಲಿ ಬೇರೊಬ್ಬ ಹುಡುಗನನ್ನು ಮದುವೆಯಾಗಿದ್ದಳು. ಆದರೆ ಇತ್ತೀಚೆಗೆ ಮಾಜಿ ಪ್ರಿಯಕರ ಟೆಕ್ಕಿ ಆಗಾಗ ಫೋನ್ ಮಾಡಿ ಬ್ರೇಕಪ್ ಮಾಡಿಕೊಂಡಿದ್ದ ಸಂಬಂಧವನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದನು. ಆದರೆ ಯುವತಿ ಅವನ ಬೇಡಿಕೆಯನ್ನು ಒಪ್ಪಿಕೊಂಡಿರಲಿಲ್ಲ. ಆಗ ಆಕೆಯ ನಗ್ನ ಫೋಟೋಗಳನ್ನು ಪತಿ ಮತ್ತು ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಅಷ್ಟೇ ಅಲ್ಲದೇ ಅವಾಚ್ಯ ಶಬ್ದದಿಂದ ನಿಂದಿಸಿ, ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ. ಕೊನೆಗೆ ಆಕೆ ಪೊಲೀಸ್ ಠಾಣೆಗೆ ಹೋಗಿ ಟೆಕ್ಕಿ ವಿರುದ್ಧ ದೂರು ದಾಖಲಿಸಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಿ ಟೆಕ್ಕಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *