ವಾಕಿಂಗ್ ಹೋಗ್ತೀನಿ ಎಂದು ಹೇಳಿದ್ದ ಬೆಂಗಳೂರು ಟೆಕ್ಕಿ ನಾಪತ್ತೆ

ಬೆಂಗಳೂರು: ವಾಕಿಂಗ್ ಹೋಗುವುದಾಗಿ ಪಾಲಕರಿಗೆ ಹೇಳಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ನಾಪತ್ತೆಯಾಗಿದ್ದಾರೆ.

ಪದ್ಮನಾಭನಾಗರ ’12’ ಎ ಕ್ರಾಸ್‍ನ ನಿವಾಸಿ ಆರ್. ಪ್ರಸನ್ನ(39) ಎಂಬುವವರು ನವೆಂಬರ್ 9 ರಿಂದ ಕಾಣೆಯಾಗಿದ್ದಾರೆ. ಲಂಡನ್ ಟಿಸಿಎಸ್ ಕಂಪನಿಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದ ಇವರು ಬೆಂಗಳೂರಿನಲ್ಲಿ ಆರ್ಟಿಫಿಶಲ್ ಇಂಟೆಲಿಜೆನ್ಸಿ ಎಂಬ ಖಾಸಗಿ ಕಂಪನಿ ತೆರೆದಿದ್ದರು. ಇದಾದ ಬಳಿಕ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು.

ನ.9ರಂದು ವಾಕಿಂಗ್ ಮಾಡುವುದಾಗಿ ಹೇಳಿ ಮನೆಯಿಂದ ತೆರಳಿದ ಪ್ರಸನ್ನ ವಾಪಸ್ಸು ಬಂದಿಲ್ಲ. ಆತಂಕಗೊಂಡ ಪಾಲಕರು ಕೂಡಲೇ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತನಾಡುವ ಇವರು ಕೆಂಪು ಬಣ್ಣ, ದುಂಡಾದ ಮುಖ ಮತ್ತು ಆಕರ್ಷಕ ಮೈಕಟ್ಟು ಹೊಂದಿದ್ದಾರೆ.

ಪ್ರಸನ್ನ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇವರ ಬಗ್ಗೆ ಸುಳಿವು ಸಿಕ್ಕರೇ ಕೂಡಲೇ ಕೆಳಗಡೆ ನೀಡಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿ ತಿಳಿಸಿ ಎಂದು ಪಾಲಕರು ಮತ್ತು ಪತ್ನಿ ಮನವಿ ಮಾಡಿದ್ದಾರೆ.

ಸಂಪರ್ಕಿಸಬೇಕಾದ ಸಂಖ್ಯೆ: 94835 83302, 90360 45058, 73490 56812

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *