ಕಾಸರಗೋಡಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ “ಚಾರ್ಲಿ 777 ” ತೋರಿಸಲು ಮುಂದಾದ ಟೀಮ್

ಕ್ಷಿತ್ ಶೆಟ್ಟಿ ನಟಿಸಿರುವ ಇತ್ತೀಚೆಗೆ ತೆರೆಕಂಡು ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವ ಚಿತ್ರ ‘777 ಚಾರ್ಲಿ’ ಸಿನಿಮಾವನ್ನು ಕಾಸರಗೋಡಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೋರಿಸಲು ಮುಂದಾಗಿದ್ದಾರೆ ನಿರ್ದೇಶಕ ಕಿರಣ್ ರಾಜ್. ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

ನಿರ್ದೇಶಕ ಕಿರಣ್ ರಾಜ್ ಕಾಸರಗೋಡಿನವರು. ತಮ್ಮೂರಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸುವ ಹಂಬಲ ನಿರ್ದೇಶಕರಿಗೆ. ಈ ವಿಷಯವನ್ನು ಕಾಸರಗೋಡಿನ ಡಿಡಿಇ ಅವರಿಗೆ ಕಿರಣ್ ರಾಜ್  ಲಿಖಿತವಾಗಿ ತಿಳಿಸಿದರು. ನಿರ್ದೇಶಕರ ಮನವಿಗೆ ಸ್ಪಂದಿಸಿರುವ ಡಿಡಿಇ ಅವರಿಂದ ಉತ್ತಮ ಸ್ಪಂದನೆ ದೊರಕಿದೆ.

ಕಾಸರಗೋಡಿನ ಮೆಹಬೂಬ್ ಚಿತ್ರಮಂದಿರದವರು ರಿಯಾಯಿತಿ ದರದಲ್ಲಿ “777ಚಾರ್ಲಿ” ಚಿತ್ರವನ್ನು ತೋರಿಸಲು ಮುಂದಾಗಿದ್ದಾರೆ. 130 ರೂಪಾಯಿ ಟಿಕೇಟ್ ದರವಿದ್ದು, ವಿದ್ಯಾರ್ಥಿಗಳಿಗೆ 80 ರೂಪಾಯಿಗೆ ಟಿಕೇಟ್ ನೀಡಲು ನಿರ್ಧರಿಸಲಾಗಿದೆ. ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆತರುವ ಅಧ್ಯಾಪಕರಿಗೆ ಉಚಿತ ಪ್ರವೇಶವಿರುತ್ತದೆ.

Live Tv

Comments

Leave a Reply

Your email address will not be published. Required fields are marked *