2021-22ರ ಅವಧಿಯಲ್ಲಿ ಟೀಂ ಇಂಡಿಯಾಗೆ 6 ನಾಯಕರು

TEAM INDIA

ಮುಂಬೈ: 2021 ರಿಂದ 2022ರ ಅವಧಿಯಲ್ಲಿ ಟೀಂ ಇಂಡಿಯಾ ಬರೋಬ್ಬರಿ 6 ನಾಯಕರನ್ನು ಕಂಡಿದೆ.

2021ರ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದ್ದರು. ನಂತರ ಟೀಂ ಇಂಡಿಯಾದ ಮೂರು ಮಾದರಿ ತಂಡಕ್ಕೂ ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಲಾಯಿತು. ನಂತರ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಗಾಯಗೊಂಡಾಗ ಕನ್ನಡಿಗ ಕೆ.ಎಲ್ ರಾಹುಲ್‍ಗೆ ನಾಯಕತ್ವದ ಪಟ್ಟ ಕಟ್ಟಲಾಗಿತ್ತು. ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾಗೆ ಶಿಖರ್ ಧವನ್ ನಾಯಕರಾಗಿದ್ದರು. ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ರಿಷಭ್ ಪಂತ್‍ರನ್ನು ನಾಯಕನ್ನಾಗಿ ನೇಮಿಸಲಾಗಿತ್ತು. ಇದೀಗ ಮುಂದಿನ ಐರ್ಲೆಂಡ್ ಪ್ರವಾಸಕ್ಕೆ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಟೀಂ ಇಂಡಿಯಾ ಒಟ್ಟು 6 ಜನ ನಾಯರನ್ನು ಕಂಡಂತಾಗುತ್ತದೆ. ಇದನ್ನೂ ಓದಿ: ಮಳೆಯಿಂದ ಭಾರತ Vs ಆಫ್ರಿಕಾ ಟಿ20 ಪಂದ್ಯ ರದ್ದು – ನಿರಾಶಾದಾಯಕ ಅಂತ್ಯಗೊಂಡ ಸರಣಿ

ಭಾರತ ತಂಡದ ಖಾಯಂ ನಾಯಕರಾಗಿ ರೋಹಿತ್ ಶರ್ಮಾ ಇದ್ದರೆ, ಗಾಯಗೊಂಡು ಅಥವಾ ಸರಣಿಯಿಂದ ವಿಶ್ರಾಂತಿ ಪಡೆದಾಗ ಇತರರ ಆಟಗಾರರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಜೊತೆಗೆ ಟೀಂ ಇಂಡಿಯಾದ ಎರಡು ತಂಡಗಳು ಬೇರೆ ಬೇರೆ ದೇಶಗಳಲ್ಲಿ ಸರಣಿ ಆಡುವ ಮೂಲಕ ಶ್ರೀಲಂಕಾ ಸರಣಿಯಲ್ಲಿ ಯಶಸ್ವಿ ಕಂಡಿದೆ. ಇದನ್ನೂ ಓದಿ: ಧೋನಿಯ ಆ ಒಂದು ಮಾತಿನಿಂದ ನನ್ನ ಕ್ರಿಕೆಟ್ ಜೀವನ ಬದಲಾಯಿತು: ಪಾಂಡ್ಯ

ಈ ಬಗ್ಗೆ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಕೂಡ ಮಾತನಾಡಿದ್ದು, ನಾನು ಭಾರತ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ 6 ಜನ ನಾಯಕರೊಂದಿಗೆ ಕಾರ್ಯನಿರ್ವಹಿಸಿದ್ದೇನೆ. ಎಲ್ಲರೊಂದಿಗೂ ಕಾರ್ಯನಿರ್ವಹಿಸುವಾಗ ಹೊಸ ಸವಾಲು ಎದುರಾಗಿದೆ. ಕೊರೊನಾ ಟೈಮ್‍ನಲ್ಲಿ ತಂಡದೊಂದಿಗೆ ಇದ್ದ ಸಮಯ ಉತ್ತಮವಾಗಿತ್ತು ಎಂದು ಅನುಭವ ಹಂಚಿಕೊಂಡಿದ್ದಾರೆ.

Live Tv

Comments

Leave a Reply

Your email address will not be published. Required fields are marked *