ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರ ಮಸ್ತ್ ಡ್ಯಾನ್ಸ್ – ಕೆಲಸದಿಂದ ಅಮಾನತು

ಲಕ್ನೋ: ಆಗ್ರಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಖಾಲಿ ಕ್ಲಾಸ್ ರೂಂನಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿದ 5 ಶಿಕ್ಷಕಿಯರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ಶಿಕ್ಷಕಿಯರನ್ನು ರಶ್ಮಿ ಸಿಸೋಡಿಯಾ, ಜೀವಿಕಾ ಕುಮಾರಿ, ಅಂಜಲಿ ಯಾದವ್, ಸುಮನ್ ಕುಮಾರಿ ಮತ್ತು ಸುಧಾ ರಾಣಿ ಎಂದು ಗುರುತಿಸಲಾಗಿದ್ದು, ಜನಪ್ರಿಯ ‘ಮೈನು ಲೆಹೆಂಗಾ ಲೆಡೆ ಮೆಹಂಗಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಈ ವೀಡಿಯೋವನ್ನು ಮಾರ್ಚ್ 21ರಂದು ಸೆರೆ ಹಿಡಿಯಲಾಗಿದ್ದು, ಗುರುವಾರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಈ ಕುರಿತಂತೆ ಶಿಕ್ಷಣ ಇಲಾಖೆ ತನಿಖೆ ನಡೆಸಿದೆ. ಇದನ್ನೂ ಓದಿ: ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್

ಈ ಬಗ್ಗೆ ಮಾತನಾಡಿದ ಮೂಲ ಶಿಕ್ಷಣಾಧಿಕಾರಿ(ಬಿಎಸ್‍ಎ)ಬ್ರಜರಾಜ್ ಸಿಂಗ್ ಅವರು, ಶಿಕ್ಷಕಿಯರು ನೃತ್ಯ ಮಾಡಿರುವ ಹಾಡು ಅನಕ್ಷರತೆಯನ್ನು ತೋರಿಸುತ್ತದೆ. ತರಗತಿಯಲ್ಲಿ ಶಿಕ್ಷಕಿಯರು ನೃತ್ಯ ಮಾಡುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದಾರೆ ಮತ್ತು ಶಿಕ್ಷಣ ಇಲಾಖೆಯ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಜೊತೆಗೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಐವರು ಶಿಕ್ಷಕಿಯರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಖ್ನೇರಾ ಬ್ಲಾಕ್‍ನ ಸಾಧನ್‍ನಲ್ಲಿರುವ ಐವರು ಸಹಾಯಕ ಶಿಕ್ಷಕಿಯರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಶಿಕ್ಷಕಿಯರು ನೀಡಿದ ಸ್ಪಷ್ಟೀಕರಣ ತೃಪ್ತಿದಾಯಕದಲ್ಲ ಎಂದು ಎನಿಸಿತು. ನಂತರ ಅವರನ್ನು ಶಾಲೆಯಿಂದ ಶನಿವಾರ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್

Comments

Leave a Reply

Your email address will not be published. Required fields are marked *