ವಿಶೇಷ ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ!

ತುಮಕೂರು: ಶಿಕ್ಷಕನೊಬ್ಬ ವಿಶೇಷ ತರಗತಿ ನೆಪದಲ್ಲಿ ವಿದ್ಯಾರ್ಥಿನಿಯನ್ನು ಶಾಲೆಗೆ ಕರೆಸಿಕೊಂಡು ಕಾಮ ಪಾಠದ ಜೊತೆ ಕಿಸ್ಸಿಂಗ್ ತರಬೇತಿ ಕೊಡುತ್ತಿದ್ದ ಪ್ರಕರಣವೊಂದು ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಕನ್ನಡ ಶಿಕ್ಷಕ. ಜಿಲ್ಲೆಯ ಮಧುಗಿರಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಸುವರ್ಣ ಮುಖಿ ಪ್ರೌಢಶಾಲೆಯ ಕನ್ನಡ ಶಿಕ್ಷಕನಾಗಿರುವ ಚಂದ್ರಶೇಖರನ ಕಾಮಚೇಷ್ಟೆ ಬೆಳಕಿಗೆ ಬಂದಿದೆ.

ಚಂದ್ರಶೇಖರ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಅಲ್ಲದೇ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಮಾಟ ಮಂತ್ರ ಮಾಡಿ ನಿಮ್ಮ ತಂದೆ-ತಾಯಿಯರನ್ನು ಸಾಯಿಸುತ್ತೇನೆ ಎಂದು ಮಕ್ಕಳನ್ನು ಹೆದರಿಸಿದ್ದ.

ವಿಶೇಷ ತರಗತಿಗೆಂದು ನಮ್ಮನ್ನು ಕರೆಸಿಕೊಂಡು ಕಿಸ್ ಕೊಡು ಎಂದು ಬಲವಂತ ಮಾಡುತ್ತಾರೆಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಚಂದ್ರಶೇಖರ್ ಕೆಲ ವಿದ್ಯಾರ್ಥಿನಿಯರನ್ನು ಡಾರ್ಲಿಂಗ್ ಅಂತಾನೂ ಕರಿಯುತ್ತಾನೆ ಎಂಬುದು ತಿಳಿದು ಬಂದಿದೆ.

ಸದ್ಯ ಈ ವಿಷಯ ತಿಳಿದ ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡು ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಕಾಮುಚೇಷ್ಟೆ ಬಟಾಬಯಲಾಗುತ್ತಿದ್ದಂತೆ ಕನ್ನಡ ಶಿಕ್ಷಕ ಪರಾರಿಯಾಗಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *