ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಹಸುಗೂಸನ್ನು ಕಾಡಿಗೆ ಎಸೆದ ದಂಪತಿ

ಭೋಪಾಲ್: ಅಬ್ಬಬ್ಬಾ ಎಂಥಾ ಜನರೆಲ್ಲ ಪ್ರಪಂಚದಲ್ಲಿ ಇರ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಇಲ್ಲೊಂದು ದಂಪತಿ ತಮ್ಮ ಸರ್ಕಾರಿ ಕೆಲಸ ಉಳಿಸಿಕೊಳ್ಳಲು ನಾಲ್ಕನೇ ಮಗುವನ್ನು ಕಾಡಿಗೆ ಎಸೆದಿರುವ ಘಟನೆ ಮಧ್ಯಪ್ರದೇಶದ (Madhya Pradesh) ಛಿಂದ್ವಾರಾದಲ್ಲಿ ನಡೆದಿದೆ.

ಬಬ್ಲು ದಾಂಡೋಲಿಯಾ ಹಾಗೂ ರಾಜಕುಮಾರಿ ದಾಂಡೋಲಿಯಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದರು (Teachers). ಮಧ್ಯಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರು ಸರ್ಕಾರಿ ನೌಕರಿಯನ್ನು ಕಳೆದುಕೊಳ್ಳುತ್ತಾರೆ ಎಂಬ ನಿಯಮವಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅವಹೇಳನ – ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಹತ್ಯೆಗೆ ಯತ್ನಿಸಿದ್ದ ಹಂತಕರು

ಈಗಾಗಲೇ ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ತನ್ನ ನಾಲ್ಕನೆಯ ಗರ್ಭಧಾರಣೆಯನ್ನು ಮುಚ್ಚಿಟ್ಟಿದ್ದ ಶಿಕ್ಷಕಿ, ಸೆ.23 ರಂದು ಮಗುವಿಗೆ ಜನ್ಮ ನೀಡಿದ್ದಳು. ಈಗಾಗಲೇ ಮೂವರು ಮಕ್ಕಳಿರುವುದರಿಂದ, ನಾಲ್ಕನೇ ಮಗುವಿದೆ ಎಂದು ಗೊತ್ತಾದರೆ ಖಂಡಿತ ಕೆಲಸ ಕಳೆದುಕೊಳ್ಳುತ್ತೇವೆ ಎಂದು ಭಯಭೀತರಾಗಿ ಆಗಷ್ಟೇ ಹುಟ್ಟಿದ ಕಂದಮ್ಮನನ್ನು ದಂಪತಿಯು ಕಾಡಿನಲ್ಲಿ ಎಸೆದು ಬಂದಿದ್ದರು. ಇದನ್ನೂ ಓದಿ: ಹಿಟ್ & ರನ್‌ಗೆ ವಿದ್ಯಾರ್ಥಿನಿ ಬಲಿ – ಟಿಪ್ಪರ್‌ ಚಾಲಕ ಅರೆಸ್ಟ್‌

ನAದನವಾಡಿ ಗ್ರಾಮದಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದವರಿಗೆ ಮೊದಲು ಮಗುವಿನ ಕೂಗುವುದು ಕೇಳಿಸಿತ್ತು. ಇದು ಪ್ರಾಣಿಯ ಚೀರಾಟ ಎಂದು ಭಾವಿಸಿದ್ದರು. ಬಳಿಕ ಚೀರಾಟದ ಶಬ್ಧವನ್ನು ಆಲಿಸಿ, ಹಿಂಬಾಲಿಸಿದಾಗ ಮೈಯೆಲ್ಲ ರಕ್ತದ ಕಲೆಯಿದ್ದ ಮಗೊಂದು ಕಲ್ಲಿನ ಹಿಂದಿರುವುದು ಕಾಣಿಸಿತ್ತು.

ಬಳಿಕ ಗ್ರಾಮಸ್ಥರು ಮಗುವನ್ನು ರಕ್ಷಣೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಸುರಕ್ಷಿತವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಪೊಲೀಸರ ತನಿಖೆ ವೇಳೆ ದಂಪತಿಯು ಸರ್ಕಾರಿ ಕೆಲಸದಾಸೆಗೆ ಮಗುವನ್ನು ಕಾಡಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಪೊಲೀಸರು ದಂಪತಿ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.