ಗದಗ: ಶಿಕ್ಷಕನ ಅನುಚಿತ ವರ್ತನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಭೋಪಳಾಪೂರ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಎಂ ಹೋನಕೇರಿ ಎಂಬ ಶಿಕ್ಷಕ ಶಾಲೆಯ ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದನು. ಕೆಲವೊಮ್ಮೆ ಅಸಭ್ಯದಿಂದ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಆಕ್ರೋಶಗೊಂಡ ಪಾಲಕರು ಶಾಲೆಗೆ ಬೀಗ ಜಡಿದು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದು ಆರೋಪಿತ ಶಿಕ್ಷಕ ಶಾಲೆಗೆ ಗೈರು ಹಾಜರಾಗಿದ್ದರಿಂದ ಗ್ರಾಮಸ್ಥರು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸ್ಥಳಕ್ಕೆ ರೋಣ ಬಿಇಓ ನಂಜುಂಡಯ್ಯ ಹಾಗೂ ಸಿಆರ್ ಪಿ ಅಧಿಕಾರಿಗಳು ಆಗಮಿಸಿದ್ದು, ಸಮಸ್ಯೆ ಆಲಿಸಲು ಬಂದ ಬಿಇಓಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಶಿಕ್ಷಕನ ಅನುಚಿತ ವರ್ತನೆಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಿಮಗೆ ಮನವಿ ಮಾಡಿದ್ದೇವೆ. ಆದರೆ ಈವರೆಗೂ ಶಿಕ್ಷಕನ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಯಾಕೆ ಅಂತ ಅಧಿಕಾರಿಗಳ ಬೆವರಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಕ ವಿ.ಎಂ ಹೊನಕೇರಿ ಅಮಾನತ್ತುಗೊಳಿಸುವಂತೆ ರೋಣ ಬಿಇಓ ನಂಜುಂಡಯ್ಯಗೆ ಕೆಲಕಾಲ ದಿಗ್ಭಂದನ ಹಾಕಿದ್ದರು. ಕೊನೆಗೆ ಶಿಕ್ಷಕ ಹೊನಕೇರಿ ಗ್ರಾಮಸ್ಥರ ಎದುರು ಕೈಮುಗಿದು ಕ್ಷಮೆ ಕೇಳಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply