ಕೊನೆಯ ಬಾರಿ ನಿನ್ನ ನೋಡುವ ಆಸೆ – ನಂಬಿ ಹೋದವಳಿಗೆ ಗುಂಡು ಹೊಡೆದ

ಚಂಡೀಗಢ: ಪಂಜಾಬ್‍ನ ಲೂಧಿಯಾನದ ಟ್ಯಾಕ್ಸಿ ಚಾಲಕನೋರ್ವ ತನ್ನ ಮಾಜಿ ಪ್ರಿಯತಮೆಗೆ ಗುಂಡು ಹಾರಿಸಿದ್ದಾನೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪರಮವೀರ್ ಸಿಂಗ್ ಪ್ರಿಯತಮೆಗೆ ಗುಂಡು ಹಾರಿಸಿದ ಪ್ರಿಯಕರ. ಲೂಧಿಯಾನದ ಸಂದೋಢ ನಿವಾಸಿಯಾಗಿರುವ ಪರಮವೀರ್ ನಗರದ ನರ್ಸ್ ಜೊತೆ ಪ್ರೇಮಪಾಶದಲ್ಲಿ ಬಿದ್ದಿದ್ದ. ಕಳೆದೆರಡು ವರ್ಷಗಳಿಂದ ಇಬ್ಬರು ಸಂಬಂಧದಲ್ಲಿದ್ದರು. ಇಬ್ಬರ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿದ್ದರಿಂದ ನರ್ಸ್ ಪರಮವೀರ್ ನಿಂದ ದೂರವಾಗಿದ್ದಳು.

 

ಎರಡು ವರ್ಷದ ನಂತರ ಬೇರೆಯಾದ ಗೆಳತಿಗೆ ಫೋನ್ ಮಾಡಿದ್ದ ಪರಮವೀರ್ ಕೊನೆಯ ಬಾರಿ ನಿನ್ನನ್ನು ನೋಡುವ ಆಸೆ ಆಗಿದೆ. ಒಂದು ಸಾರಿ ಭೇಟಿ ಆಗೋಣ ಎಂದು ಮನವಿ ಮಾಡಿಕೊಂಡಿದ್ದನು. ಪರಮವೀರ್ ಮಾತಿನಂತೆ ಮುಲ್ಲನಪುರಕ್ಕೆ ಬಂದಿದ್ದಳು. ಈ ವೇಳೆಯೂ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಕೋಪದಲ್ಲಿದ್ದ ಪರಮವೀರ್ ತನ್ ಗನ್ ನಿಂದ ಶೂಟ್ ಮಾಡಿ ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದನು.

ಯುವತಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ನಡೆದ 15 ನಿಮಿಷದಲ್ಲಿಯೇ ಅರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ವಿಚಾರಣೆ ವೇಳೆ, ಗೆಳತಿ ತನ್ನನ್ನು ನಿರ್ಲಕ್ಷಿಸಿದ್ದರಿಂದ ಶೂಟ್ ಮಾಡಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Comments

Leave a Reply

Your email address will not be published. Required fields are marked *