ಎರಡನೇ ಐಫೋನ್‌ ಘಟಕ ತೆರೆಯಲು ಮಾತುಕತೆ ಆರಂಭಿಸಿದ ಟಾಟಾ

ಮುಂಬೈ: ಈಗಾಗಲೇ ಐಫೋನ್‌ (iPhone) ತಯಾರಿಸುತ್ತಿರುವ ಟಾಟಾ ಸಮೂಹ (Tata Group) ಈಗ ಎರಡನೇ ಐಫೋನ್‌ ಘಟಕವನ್ನು ತೆರೆಯಲು ಮತುಕತೆ ನಡೆಸುತ್ತಿದೆ.

ಟಾಟಾ ಸಮೂಹ ಐಫೋನ್‌ ತಯಾರಿಸುತ್ತಿರುವ ಪೆಗಟ್ರಾನ್‌ (Pegatron) ಕಂಪನಿ ಜೊತೆ ಮಾತುಕತೆ ನಡೆಸುತ್ತಿದೆ. ಮಾತುಕತೆ ಯಶಸ್ವಿಯಾದರೆ ತೈವಾನ್‌ ಕಂಪನಿಯ ಜೊತೆಗೂಡಿ ತಮಿಳುನಾಡಿನ ಹೊಸೂರಿನಲ್ಲಿ ಐಫೋನ್‌ ಜೋಡಣಾ ಘಟಕ ಆರಂಭವಾಗಲಿದೆ. ಇದನ್ನೂ ಓದಿ: ಎಕ್ಸ್‌ನ ಸುರಕ್ಷತಾ ವಿಭಾಗದಿಂದ 1 ಸಾವಿರ ಉದ್ಯೋಗಿಗಳು ಮನೆಗೆ

ಭಾರತದಲ್ಲಿ ಆಪಲ್‌ (Apple) ಮಾರುಕಟ್ಟೆಗೆ ಬೇಡಿಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಮಾತಕತೆಯ ಸುದ್ದಿ ಪ್ರಕಟವಾಗಿದೆ. ಜಂಟಿ ಹೂಡಿಕೆಯಲ್ಲಿ ಟಾಟಾ ಕಂಪನಿ ಪಾಲು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ.

ಐಫೋನ್‌ ತಯಾರಿಸುವ ವಿಸ್ಟ್ರಾನ್‌ (Wistron) ಕಂಪನಿಯ ಭಾರತದ ಘಟಕವನ್ನು ಖರೀದಿಸುವ ಮೂಲಕ ಐಫೋನ್‌ ತಯಾರಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಟಾಟಾ ಕಂಪನಿ ಪಾತ್ರವಾಗಿತ್ತು. ಪ್ರಸ್ತುತ, ಪೆಗಾಟ್ರಾನ್ 5,964 ಕೋಟಿ ರೂ. ಮೌಲ್ಯದ ಕಂಪನಿಯಾಗಿ ಗುರುತಿಸಿಕೊಂಡಿದೆ.