ಬಲವಂತವಾಗಿ ಮತಾಂತರ ಮಾಡಿದ್ರೆ ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧ: ತಾರಾ

ಹುಬ್ಬಳ್ಳಿ: ಯಾರಿಗೆ ಆಗಲಿ ಬಲವಂತವಾಗಿ ಮತಾಂತರ ಮಾಡಿದರೆ ಅದು ಕಾನೂನು ಮತ್ತು ವೈಯಕ್ತಿಕವಾಗಿ ವಿರೋಧ ಇದೆ ಎಂದು ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾವು ಹುಟ್ಟಿನಿಂದ ಬಂದ ಧರ್ಮವೇ ನಮ್ಮ ಧರ್ಮ ಆಗಿರುತ್ತದೆ. ಆದರೆ ಯಾರದೋ ಬಲವಂತಕ್ಕಾಗಿ, ಅಥವಾ ಎಮೋಷನಲ್ ಬ್ಲಾಕ್ ಮೇಲ್ ಆಗಲಿ ಬೇರೆ ಅನುಕೂಲ ಮಾಡೋದಾಗಿ ಆಸೆ ಆಮಿಷ ಒಡ್ಡಿ ಮತಾಂತರ ಮಾಡೋದು ಕಾನೂನು ವಿರೋಧವಾಗಿದೆ ಎಂದರು.

ಇಂಥ ಕೆಲಸಕ್ಕೆ ಯಾರಾದರೂ ಕೈಹಾಕಿದ್ರೆ ಅದು ಶಿಕ್ಷೆಗೆ ಅರ್ಹ ಅನ್ನೋದು ನಮ್ಮ ಆಸೆ, ಎಲ್ಲರಿಗೂ ವೈಯಕ್ತಿಕವಾದ ನಿರ್ಧಾರ ಇರುತ್ತೆ, ಆದರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದು ಸರ್ಕಾರದ ಕಾಳಜಿ. ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದು, ಅದು ಅವರ ವೈಯಕ್ತಿಕ ವಿಚಾರ, ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಈ ಕಾಯ್ದೆ ಜಾರಿ ಆಗುತ್ತಿದೆ. ಯಾವುದೇ ಕುಟುಂಬ ಅಥವಾ ವೈಯಕ್ತಿಕವಾಗಿ ಸರ್ಕಾರ ಕೈಹಾಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಿಂದ ‘ಸುಶಾಸನ ಸಂಗಮ’ಕ್ಕೆ ವಾರಾಣಸಿಗೆ ಹೊರಟ ಸಿಎಂ ಬೊಮ್ಮಾಯಿ

BJP - CONGRESS

ಎನ್‍ಆರ್‌ಐಗಳ ಕೈವಾಡ ಇದರಲ್ಲಿ ಇದೆ ಎಂದು ಆರೋಪಿಸಿದ ತಾರಾ, ಜೊತೆಗೆ ಬೇರೆ ಬೇರೆ ದೇಶಗಳ ಹಣ ಸಹಾಯ ಆಗುತ್ತಿದೆ ಅನ್ನೋ ಮಾಹಿತಿ ಇವೆ, ಆ ರೀತಿ ಇದ್ದರೂ ಇರಬಹುದು ಎಂದರು. ಇದನ್ನೂ ಓದಿ: ನಾಳೆ ಬೆಳಗಾವಿ ಬಂದ್‍ಗೆ MES ಕರೆ – ಬಂದ್‍ಗೆ ಅವಕಾಶ ಕೊಡಲ್ಲ ಎಂದ ಕರ್ನಾಟಕ ಪೊಲೀಸ್

Comments

Leave a Reply

Your email address will not be published. Required fields are marked *