ಟೋಪಿ ತೊಟ್ಟು, ನಮಾಜ್‌ ಮಾಡಿ ಇಫ್ತಾರ್‌ ಕೂಟದಲ್ಲಿ ನಟ ವಿಜಯ್‌ ಭಾಗಿ – ‘ಕುಂಭಮೇಳಕ್ಕೆ ಹೋಗಿದ್ರಾ’ ಅಂತ ನೆಟ್ಟಿಗರು ಪ್ರಶ್ನೆ

ಚೆನ್ನೈ: ತಮಿಳು ಸೂಪರ್‌ಸ್ಟಾರ್‌ ದಳಪತಿ ವಿಜಯ್‌ (Thalapathy Vijay) ಅವರು ರಂಜಾನ್‌ ಸಮಯದಲ್ಲಿ ‘ಇಫ್ತಾರ್‌’ (Iftar) ಕೂಟ ಆಯೋಜಿಸಿದ್ದರು. ಈ ವೇಳೆ, ಅವರು ಸ್ಕಲ್‌ ಕ್ಯಾಪ್‌ (ಮುಸ್ಲಿಮರ ಟೋಪಿ) ಧರಿಸಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಚೆನ್ನೈನಲ್ಲಿ ನಟ ಹಾಗೂ ರಾಜಕಾರಣಿ ವಿಜಯ್‌ ಅವರು ಚೆನ್ನೈನಲ್ಲಿ ಇಫ್ತಾರ್‌ ಕೂಟ ಆಯೋಜಿಸಿದ್ದರು. ಟೋಪಿ ತೊಟ್ಟು, ಮುಸ್ಲಿಂ ಬಾಂಧವರೊಂದಿಗೆ ನಮಾಜ್‌ ಮಾಡಿರುವ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಸ್‌ ಮಾಡಿದ್ದಾರೆ. ಇದನ್ನೂ ಓದಿ: ಯೂರೋಪ್‌, ಅಮೆರಿಕ, ದುಬೈಗೆ ನಿರಂತರ ಸುತ್ತಾಟ – ನಟಿ ರನ್ಯಾ ಟ್ರಾವೆಲ್‌ ಹಿಸ್ಟರಿ ಬಯಲು

‘ಅವರು ಕುಂಭಮೇಳಕ್ಕೆ ಭೇಟಿ ನೀಡಿದ್ದಾರಾ? ಇದು ಜಾತ್ಯತೀತತೆ ಅಥವಾ ಈ ಗೂಂಡಾಗಳಿಗೆ ಎಲ್ಲಾ ಧರ್ಮಗಳನ್ನು ಗೌರವಿಸುವ ಬಗ್ಗೆ ಕೇಳುತ್ತಿಲ್ಲ. ಇದು ಕೇವಲ ಸಮಾಧಾನಕ್ಕಾಗಿ. ನಾಚಿಕೆಗೇಡಿನ ಸಂಗತಿ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು, ‘ಅವರಿಗೆ ಈ ಆಟ ಚೆನ್ನಾಗಿ ತಿಳಿದಿದೆ’ ಎಂದು ಕಾಲೆಳೆದಿದ್ದಾರೆ.

‘ತಮಿಳುನಾಡಿನಲ್ಲಿ ಕೇವಲ ಶೇ.5 ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಆದ್ದರಿಂದ ಯಾವುದೇ ಪಕ್ಷಕ್ಕೆ ಚುನಾವಣೆ ಗೆಲ್ಲಲು ಅವರ ಬೆಂಬಲ ಅಗತ್ಯವಿಲ್ಲ’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಾಸ್ಟರ್ ಆನಂದ್ ಪತ್ನಿಯ 2 ಕಾಲಿಗೆ ಬ್ಯಾಂಡೇಜ್- ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್

‘ಇದು ತುಷ್ಟೀಕರಣ ರಾಜಕೀಯ. ಇದನ್ನು ಒಂದು ದಿನಕ್ಕಷ್ಟೇ ಯಾಕೆ ಸೀಮಿತಿಗೊಳಿಸಿಕೊಳ್ಳಬೇಕು? ಅವರು ಮುಸ್ಲಿಮರ ಭಾಗವಹಿಸುವಿಕೆಯ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಯಾವಾಗಲೂ ಮತಗಳನ್ನು ಕೇಳುವತ್ತ ಗಮನಹರಿಸುತ್ತಾರೆ’ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ದಳಪತಿ ವಿಜಯ್‌ ಅವರು ಸಿನಿಮಾ ರಂಗವನ್ನು ಬಿಟ್ಟು ರಾಜಕೀಯದತ್ತ ಗಮನ ಹರಿಸಿದ್ದಾರೆ. ‘ತಮಿಳಗ ವೆಟ್ರಿ ಕಳಗಂ’ ಪಕ್ಷ ಕಟ್ಟಿರುವ ಅವರು ರಾಜಕೀಯ ಜೀವನದಲ್ಲಿ ಸಕ್ರಿಯರಾಗಿದ್ದಾರೆ.