ಪತಿಯ ಮರ್ಮಾಂಗ ಕತ್ತರಿಸಿ ಪ್ರಿಯಕರನ ಜೊತೆ ಓಡಿ ಹೋದ ಪತ್ನಿ!

ತಿರುವನಂತಪುರಂ: ಪತಿಯ ಮರ್ಮಾಂಗವನ್ನು ಕತ್ತರಿಸಿ, ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ 45 ವರ್ಷದ ಮಹಿಳೆ ಈ ಕೃತ್ಯ ಎಸಗಿದ್ದು, ಪತಿಯ ಜೊತೆಗೆ ಸೋಮವಾರ ವೆಲ್ಲೂರು ಜಿಲ್ಲೆಯ ಪ್ರವಾಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ನಡೆದದ್ದು ಏನು?
ವೆಲ್ಲೂರಿಗೆ ದಂಪತಿ ಪ್ರವಾಸಕ್ಕೆ ಹೋಗಿದ್ದರು. ಆಗ ಪತ್ನಿಗೆ ತನ್ನ ಹಳೇ ಪ್ರಿಯಕರ ಸಿಕ್ಕಿದ್ದನು. ಆತನ ಭೇಟಿಗಾಗಿ ಹೋಗಿದ್ದ ಆಕೆ ಅರ್ಧ ಗಂಟೆಯಾದರೂ ಮರಳಲಿಲ್ಲ. ಹೀಗಾಗಿ ಪತಿ ಆಕೆಯನ್ನು ಕರೆದುಕೊಂಡು ಬರಲೆಂದು ಆಕೆಯ ಬಳಿ ತೆರಳಿದ್ದಾನೆ. ಈ ವೇಳೆ ಪತ್ನಿ ತನ್ನ ಪ್ರಿಯಕರನ ಜೊತೆ ಇರುವುದು ಪತಿಗೆ ಗೊತ್ತಾಗಿದೆ. ಇದನ್ನು ಮನಗಂಡ ಕೂಡಲೇ ಪತಿ ಆಕೆಯನ್ನು ಪ್ರಿಯತಮನಿಂದ ಎಳೆದುಕೊಂಡು ಬರಲು ಪ್ರಯತ್ನಿಸಿದ್ದಾನೆ. ಆದ್ರೆ ಆಕೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾಳೆ. ಅಲ್ಲದೇ ಪಂಚೆ ಉಟ್ಟಿದ್ದ ಪತಿಯ ಮರ್ಮಾಂಗವನ್ನೇ ಕತ್ತರಿಸಿ ಪ್ರಿಯಕರನ ಜೊತೆ ಪರಾರಿಯಾಗಿದ್ದಳು.

ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಪತಿಯನ್ನು ಗಮನಿಸಿದ ಸ್ಥಳೀಯರು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಬುಧವಾರ ಪೊಲೀಸರು ಬಂಧಿಸಿ, ವೆಲ್ಲೂರು ಕೇಂದ್ರ ಜೈಲಿನಲ್ಲಿ ಇರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *