ಪ್ರಧಾನಿ ಭೇಟಿಗೆ ಅವಕಾಶ ಕೊಟ್ಟಿಲ್ಲವೆಂದು ದೆಹಲಿಯಲ್ಲಿ ಬೆತ್ತಲೆಯಾಗಿ ಬೀದಿಗಿಳಿದ ತಮಿಳು ರೈತರು!

ಚೆನ್ನೈ: ಸಾಲ ಮನ್ನಾ ಮತ್ತು ಬರ ಪ್ಯಾಕೇಜ್‍ಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸ್ತಿರೋ ತಮಿಳುನಾಡು ರೈತರ ಅಕ್ರೋಶದ ಕಟ್ಟೆ ಒಡೆದಿದೆ.

ಕಳೆದ 28 ದಿನಗಳಿಂದ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಕೆಲವು ಮಂದಿಯ ನಿಯೋಗವೊಂದು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮನವಿ ಮಾಡಲು ಮುಂದಾಗಿದ್ದಾರೆ. ಆದರೆ ಪ್ರಧಾನಿ ಭೇಟಿಗೆ ಅವಕಾಶ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಪ್ರಧಾನಿ ಕಚೇರಿಯಿರುವ ಸೌತ್‍ಬ್ಲಾಕ್‍ನಲ್ಲಿ ರಸ್ತೆಯಲ್ಲೇ ಬೆತ್ತಲೆಯಾಗಿ ಪ್ರತಿಭಟಿಸಿದ್ದಾರೆ.

ನಗ್ನವಾಗಿ ಉರುಳು ಸೇವೆ ಮಾಡುತ್ತಾ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ನೀವು ಎಚ್ಚೆತ್ತುಗೊಳ್ಳವವರೆಗೆ ಪ್ರತಿಭಟನೆ ಮಾಡುತ್ತೇವೆ. ದಯವಿಟ್ಟು ನಮ್ಮ ನೆರವಿಗೆ ಧಾವಿಸಿ. ತುಂಬಾ ಹಸಿದಿದ್ದೇವೆ. ಹಸಿದ ಹೊಟ್ಟೆಗೆ ಅನ್ನ ಹಾಕಿ. ಸಾಯ್ತಾ ಇದ್ದೀವಿ ಎಂದು ಬೊಬ್ಬೆ ಹೊಡೆದ್ರು. ರೈತರ ತಲೆಬುರುಡೆಗಳನ್ನಿಟ್ಟುಕೊಂಡು, ಬಳಿಕ ಸತ್ತ ಹಾವನ್ನು ಕಚ್ಚುವುದರ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ರು.

ಕೂಡಲೇ ಮಧ್ಯ ಪ್ರವೇಶ ಮಾಡಿದ ಪೊಲೀಸರು ಬೆತ್ತಲೆ ಪ್ರತಿಭಟನೆ ಮಾಡ್ತಿದ್ದವರನ್ನು ವಶಕ್ಕೆ ಪಡೆದ್ರು. ರಾಜ್ಯಕ್ಕೆ 40 ಸಾವಿರ ಕೋಟಿ ರುಪಾಯಿ ಬರಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಮಿಳುನಾಡು ರೈತರು ಕಳೆದ 28 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *