ಬೆಂಗಳೂರು ಪೊಲೀಸರ ಮೊರೆ ಹೋದ ತಮಿಳುನಾಡು ಮಂತ್ರಿ ಮಗಳು

ಬೆಂಗಳೂರು: ತಮಿಳುನಾಡು ಸಚಿವರ ಪುತ್ರಿಯ ಕಿಡ್ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪುತ್ರಿ ಮತ್ತು ಪ್ರಿಯಕರ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದು, ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ತಮಿಳುನಾಡು ಸರ್ಕಾರದ ಮುಜರಾಯಿ ಸಚಿವ ಶೇಖರ್ ಬಾಬು ಪುತ್ರಿ ಜಯಕಲ್ಯಾಣಿಯು ಸತೀಶ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ನಡುವೆ ಜಯಕಲ್ಯಾಣಿ ತಮಿಳುನಾಡಿನಿಂದ ಎಸ್ಕೇಪ್ ಆಗಿದ್ದರು. ನಾಪತ್ತೆಯಾದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಜಯಕಲ್ಯಾಣಿ ಕಿಡ್ನ್ಯಾಪ್ ಆಗಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ಅರ್ಧಗಂಟೆ ಸಮಯ ಸಿಕ್ಕರೆ ಅಷ್ಟರಲ್ಲೇ ಭಯದಿಂದ ಅಡುಗೆ ಮಾಡಿ ತಿನ್ನುತ್ತಿದ್ದೆವು: ವಿದ್ಯಾರ್ಥಿನಿ ಅಕ್ಷಿತಾ

ಮನೆಯವರ ವಿರೋಧದ ನಡುವೆ ಈ ಜೋಡಿ ರಾಯಚೂರಿನ ಹಡಗಲಿ ತಾಲೂಕಿನ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿದ್ದಾರೆ. ಮಠದಲ್ಲಿ ವಿವಾಹವಾದ ನವ ಜೋಡಿ ಬೆಂಗಳೂರಿಗೆ ಬಂದು ರಕ್ಷಣೆ ಕೋರುತ್ತಿದ್ದಾರೆ.

ನನಗೂ ಮತ್ತು ಪ್ರಿಯಕರನಿಗೂ ಜೀವ ಬೆದರಿಕೆ ಇದೆ ರಕ್ಷಣೆ ಕೊಡಿ ಎಂದು ಜಯಕಲ್ಯಾಣಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *