ಪ್ರಧಾನಿ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಸಿಕ್ತು ಗಿಫ್ಟ್!

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ 68ನೇ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಬಿಜೆಪಿ ಚಿನ್ನದ ಉಂಗುರವನ್ನು ಗಿಫ್ಟ್ ಮಾಡಿದೆ.

ತಮಿಳುನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥೆ ತಮಿಳಿಸಾಯಿ ಸೌಂದರರಾಜನರ್ ಅವರು ಮಗುವಿಗೆ ಉಂಗುರ ನೀಡಿದ್ದಾರೆ. ಈ ಮೂಲಕ ಬಿಜೆಪಿ ಪ್ರಧಾನಿಯವರನ್ನು ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದಾರೆ.

ಸೌಂದರರಾಜನ್ ಅವರು ಆರೋಗ್ಯ ಕೇಂದ್ರದಲ್ಲಿ ಹುಟ್ಟಿದ ಉಳಿದ ಮಕ್ಕಳಿಗೂ ಬಹುಮಾನವನ್ನು ನೀಡಿದ್ದಾರೆ. ಮುಂದಿನ ಸೋಮವಾರ(ಮೋದಿ ಹುಟ್ಟುಹಬ್ಬ)ದಂದು ಹುಟ್ಟಿದ ಮಕ್ಕಳಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವುದಾಗಿ ರಾಜ್ಯ ಬಿಜೆಪಿ ಘಟಕ ಮೊದಲೇ ಘೋಷಣೆ ಮಾಡಿತ್ತು. ಆದ್ರೆ ಸೋಮವಾರ ಒಂದು ಮಗು ಮಾತ್ರ ಹುಟ್ಟಿತ್ತು. ಹೀಗಾಗಿ ಆ ಮಗುವಿಗೆ ಚಿನ್ನದ ಉಂಗುರವನ್ನು ಗಿಫ್ಟ್ ಮಾಡಿದೆ.

ಬಳಿಕ ಮಾಧ್ಯಮಕ್ಕೆ ಪತ್ರಿಕ್ರಿಯಿಸಿದ ಅವರು, ಸೋಮವಾರ ಹುಟ್ಟಿದ ಮಗುವಿಗೆ ನಾನು ಚಿನ್ನದ ಉಂಗುರವನ್ನು ಈಗಾಗಲೇ ಉಡುಗೊರೆಯಾಗಿ ನೀಡಿದ್ದೇನೆ. ಅಲ್ಲದೇ ಇದರ ಜೊತೆ 17-18 ದಿನಗಳ ಹಿಂದೆ ಹುಟ್ಟಿದ ಮಕ್ಕಳಿಗೂ ಗಿಫ್ಟ್ ಪ್ಯಾಕ್ ಕೊಟ್ಟಿದ್ದೇವೆ ಅಂತ ಹೇಳಿದ್ರು.

ಅಸ್ಸಾಂನಲ್ಲೂ ಮೋದಿ ಜೀ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದ್ದು, ಬಿಜೆಪಿ ವಕ್ತಾರ ಪ್ರಮೋದ್ ಸ್ವಾಮಿ ಅವರು ಗುವಾಹಟಿಯ ಹೈಸ್ಕೂಲ್ ನಲ್ಲಿ 8ನೇ ತರಗತಿಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನ ಮಾಡುವ ಮೂಲಕ ಆಚರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *