ಬೆಂಗಳೂರು: ಈಗ ದೇಶಾದ್ಯಂತ ಮಂಡ್ಯ ಸೀಮೆಯ ಅಣ್ತಮ್ಮನ ಚಿತ್ರದ್ದೇ ಹವಾ. ಕೆಜಿಎಫ್ ಚಿತ್ರದ ಟ್ರೈಲರ್ ಬಗ್ಗೆ ಸಾಲು ಸಾಲಾಗಿ ಪರಭಾಷಾ ಚಿತ್ರರಂಗದ ಅತಿರಥ ಮಹಾರಥರೇ ಮೆಚ್ಚುಗೆಯ ಮಾತಾಡುತ್ತಿದ್ದಾರೆ. ಇದೀಗ ಕಬಾಲಿ ನಿರ್ದೇಶಕ ಪಾ. ರಂಜಿತ್ ಅವರ ಸರದಿ!
ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದಾಕ್ಷಣವೇ ಪಾ ರಂಜಿತ್ ಟ್ವಟರ್ ಮೂಲಕ ಹೊಗಳಿಕೆಯ ಮಾತಾಡಿದ್ದಾರೆ. ಇದೊಂದು ಅದ್ಭುತವಾದ ಟ್ರೈಲರ್ ಅಂದಿರೋ ರಂಜಿತ್ ಯಶ್ ಮತ್ತು ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

ಕಾಳ, ಕಬಾಲಿಯಂಥಾ ಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರು ಪಾ ರಂಜಿತ್. ಅಂಥವರೇ ಕೆಜಿಎಫ್ ಟ್ರೈಲರನ್ನು ಮೆಚ್ಚಿಕೊಂಡಿರೋದು ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯ ಸಂಗತಿ. ಅಂತೂ ಇಂಥಾದ್ದೊಂದು ಸಕಾರಾತ್ಮಕ ಬೆಳವಣಿಗೆಗೆ ಯಶ್ ಅಭಿನಯದ ಕೆಜಿಎಫ್ ಚಿತ್ರ ಶ್ರೀಕಾರ ಹಾಕಿದೆ.
Awesome 😎 🎉🎉🎉trailer 💖great work 💐💐congratulations @NimmaYash &team #KGF 👏👏👏 https://t.co/l3gGU4dyZk https://t.co/3YYepBYISw
— pa.ranjith (@beemji) November 11, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply