ರಾಯಚೂರಿನಲ್ಲಿ `ಮಹಾನಟಿʼ – ಪುನೀತ್‌ ನನ್ನ ನೆಚ್ಚಿನ ನಟ ಅಂದ್ರು ಕೀರ್ತಿ ಸುರೇಶ್‌

– ಒಳ್ಳೆ ಆಫರ್‌ ಬಂದ್ರೆ ಕನ್ನಡ ಸಿನಿಮಾಕ್ಕೂ ಸೈ ಎಂದ ನಟಿ

ರಾಯಚೂರು: ಕರ್ನಾಟಕದಲ್ಲಿ ಪುನೀತ್ ರಾಜಕುಮಾರ್ (Puneeth Rajkumar) ನನ್ನ ನೆಚ್ಚಿನ ನಟ. ನಾನು ಈ ಹಿಂದೆ ಡಾ.ರಾಜ್‌ಕುಮಾರ ಅವರನ್ನ ಭೇಟಿ ಮಾಡಿದ್ದೆ, ನನ್ನ ತಾಯಿ ಅವರೊಂದಿಗೆ ನಟಿಸಿದ್ದರು ಅಂತ ಬಹುಭಾಷಾ ನಟಿ ಕೀರ್ತಿ ಸುರೇಶ್ (Keerthy Suresh) ಹೇಳಿದ್ದಾರೆ.

ರಾಯಚೂರಿನಲ್ಲಿ (Raichur) ಶಾಪಿಂಗ್ ಮಾಲ್‌ವೊಂದರ ಉದ್ಘಾಟನೆಗೆ ನಟಿ ಆಗಮಿಸಿದ್ದರು. ಈ ವೇಳೆ ಮಾತನಾಡಿ ಕನ್ನಡ ಸಿನಿಮಾಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದರು. ಒಳ್ಳೆಯ ಆಫರ್, ಉತ್ತಮ ಸ್ಕ್ರಿಪ್ಟ್ ಬಂದ್ರೆ ಖಂಡಿತ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಅಂತ ಹೇಳಿದ್ರು. ಇದನ್ನೂ ಓದಿ: ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್‌

ಇನ್ನೂ ಈಗಷ್ಟೇ ವೈವಾಹಿಕ ಜೀವನ ಆರಂಭವಾಗಿದೆ, ತುಂಬಾ ಚೆನ್ನಾಗಿ ಸಾಗುತ್ತಿದೆ ಅಂತ ತಿಳಿಸಿದರು. ಸದ್ಯ ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲಿ ನಟಿಸುತ್ತಿದ್ದು, ಇನ್ನೂ ಕೆಲ ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿದೆ ಅಂತ ಕೀರ್ತಿ ಸುರೇಶ್ ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಲೀಗ್ ಬಜೆಟ್.. ಜಿನ್ನಾ ಆತ್ಮವೇ ಸಿದ್ದರಾಮಯ್ಯಗೆ ಪ್ರಚೋದನೆ ಕೊಟ್ಟಿರಬಹುದು: ಸಿ.ಟಿ.ರವಿ