ತಮ್ಮದೇ ಸ್ವಂತ ಪಕ್ಷ ಕಟ್ಟಿ ಪಾಲಿಟಿಕ್ಸ್‌ಗೆ ವಿಜಯ್ ಎಂಟ್ರಿ

ಕಾಲಿವುಡ್ ಸ್ಟಾರ್ ವಿಜಯ್ ದಳಪತಿ (Vijay Thalapathy) ಅವರು ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಸ್ವಂತ ಪಕ್ಷ ಕಟ್ಟಿ ಪಾಲಿಟಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದಾರೆ. ‘ತಮಿಳಿಗ ವೆಟ್ರಿ ಕಳಗಂ’ (TVK) ಎಂದು ಪಕ್ಷಕ್ಕೆ ಹೆಸರನ್ನಿಟ್ಟಿದ್ದಾರೆ. ಇದನ್ನೂ ಓದಿ:ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ

ಸಾಕಷ್ಟು ಸಮಯದಿಂದ ವಿಜಯ್‌ ದಳಪತಿ ಅವರು ರಾಜಕೀಯಕ್ಕೆ ಬರುವ ಬಗ್ಗೆ ಚಾಲ್ತಿಯಲ್ಲಿತ್ತು. ಯಾವ ಪಕ್ಷಕ್ಕೆ ಸೇರಬಹುದು ಎಂದು ಭಾರೀ ಚರ್ಚೆಯಾಗಿತ್ತು. ಇದೀಗ ತಮ್ಮದೇ ಪಕ್ಷ ಕಟ್ಟಿ ಈ ಮೂಲಕ ಜನಸೇವೆ ಮಾಡಲು ವಿಜಯ್‌ ಮುಂದಾಗಿದ್ದಾರೆ. 2026ರ ವಿಧಾನಸಭಾ ಚುನಾವಣೆಗೆ ವಿಜಯ್‌ ಪಕ್ಷ ಸ್ಪರ್ಧೆಗೆ ಇಳಿಯಲಿದೆ.

ಇದೀಗ ಕಮಲ್‌ ಹಾಸನ್‌, ವಿಜಯ್‌ ಕಾಂತ್ ನಂತರ ವಿಜಯ್‌ ರಾಜಕೀಯಕ್ಕೆ ಬಂದಿದ್ದಾರೆ.