ಬಾಲಿವುಡ್ ಸಿನಿಮಾದಲ್ಲಿ ಸೂರ್ಯ ವಿಲನ್?

ಮಿಳು ನಟ ಸೂರ್ಯ ಅವರು ಸದ್ಯ ‘ಸೂರ್ಯ 44’ (Suriya 44) ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದು ನಟನ ಪಾಲಾಗಿದೆ. ‘ಧೂಮ್ 4’ನಲ್ಲಿ ಸೂರ್ಯ (Suriya) ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಧೂಮ್’ ಸಿನಿಮಾದ ಮೊದಲ ಭಾಗ ತೆರೆಕಂಡು 20 ವರ್ಷಗಳು ಕಳೆದಿವೆ. ‘ಧೂಮ್’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದ್ದು, ಇದರ ಪಾರ್ಟ್ 4 ಸಿನಿಮಾ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ:ಸೆ.29 ರಿಂದ ಬಿಗ್‌ ಬಾಸ್‌ ಕನ್ನಡ-11 ಶುರು; ಕಿಚ್ಚ ಸುದೀಪ್‌ ಆ್ಯಂಕರ್‌

ಹೀಗಿರುವಾಗ ‘ಧೂಮ್ 4’ನಲ್ಲಿ (Dhoom 4) ಖಳನಾಟನಾಗಿ ನಟಿಸಲು ಸೂರ್ಯರನ್ನು ಚಿತ್ರತಂಡ ಕೇಳಿದೆಯಂತೆ. ಸ್ಟಾರ್ ನಟನ ಮುಂದೆ ವಿಲನ್ ಆಗಿ ಘರ್ಜಿಸಲು ಸ್ಟಾರ್ ನಟನಾಗಿರುವವರೇ ನಟಿಸಿದ್ರೆ ಜುಗಲ್‌ಬಂದಿ ಚೆನ್ನಾಗಿರುತ್ತದೆ ಎಂಬುದು ಚಿತ್ರತಂಡ ಲೆಕ್ಕಚಾರ. ಹಾಗಾಗಿ ಸೂರ್ಯ ಅವರನ್ನು ಭೇಟಿಯಾಗಿ ಕಥೆ ಮತ್ತು ಪಾತ್ರದ ಬಗ್ಗೆ ತಂಡ ಮಾಹಿತಿ ನೀಡಿದೆ. ಆದರೆ ನಟಿಸಲು ‘ಕಂಗುವ’ ನಟ ಒಪ್ಪಿಕೊಂಡ್ರಾ? ಎಂಬುದು ಖಾತ್ರಿಯಾಗಿಲ್ಲ. ಈ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

ಅಂದಹಾಗೆ, ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗುತ್ತಿದೆ. ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರುತ್ತಿದೆ. ದಿಶಾ ಪಟಾನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ರೆ, ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ್ದಾರೆ.