15 ವರ್ಷಗಳ ದಾಂಪತ್ಯಕ್ಕೆ ಅಂತ್ಯ- ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ ಜಯಂ ರವಿ

ಕಾಲಿವುಡ್ ನಟ ಜಯಂ ರವಿ (Actor Jayam Ravi) ಅವರ ವೈವಾಹಿಕ ಬದುಕಿನಲ್ಲಿ ಬಿರುಕಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಚರ್ಚೆ ಗ್ರಾಸವಾಗಿತ್ತು. ಇದೀಗ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿರೋದಾಗಿ ಇಂದು (ಸೆ.9) ಸ್ವತಃ ನಟ ಜಯಂ ರವಿ ಸೋಶಿಯಲ್‌ ಮೀಡಿಯಾದಲ್ಲಿ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:‘ಭೂತ್ ಬಂಗ್ಲಾ’ ಕಥೆ ಹೇಳಲು ಸಜ್ಜಾದ ಅಕ್ಷಯ್ ಕುಮಾರ್

ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ (Aarati) ಜೊತೆಗಿನ ನನ್ನ ವಿವಾಹ ಸಂಬಂಧಕ್ಕೆ ಡಿವೋರ್ಸ್ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ ಎಂದು ನಟ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ಸಮಯದಲ್ಲಿ ನಮ್ಮ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಊಹೆಗಳು, ವದಂತಿಗಳು, ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಈ ವಿಷಯವು ಖಾಸಗಿಯಾಗಿ ಉಳಿಯಲಿ ಎಂದು ನಟ ತಿಳಿಸಿದ್ದಾರೆ.

ನನ್ನ ಆದ್ಯತೆ ಯಾವಾಗಲೂ ಒಂದೇ ಆಗಿರುತ್ತದೆ. ನನ್ನ ಪ್ರೀತಿಯ ಪ್ರೇಕ್ಷಕರಿಗೆ ಸಿನಿಮಾಗಳ ಮೂಲಕ ಮನರಂಜನೆ ನೀಡಿವುದನ್ನು ಮುಂದುವರೆಸುವುದು ಎಂದು ಜಯಂ ರವಿ ಬರೆದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಡಿವೋರ್ಸ್ ಕುರಿತು ಅಧಿಕೃತವಾಗಿ ತಿಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಜೊತೆಗಾಗಿ ಇರಿ ಎಂದೆಲ್ಲಾ ಫ್ಯಾನ್ಸ್‌ ನಟನಿಗೆ ಮನವಿ ಮಾಡಿದ್ದಾರೆ.

ಅಂದಹಾಗೆ, ಆರತಿ ಮತ್ತು ಜಯಂ ರವಿ 2009ರಲ್ಲಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳು ಸಾಕ್ಷಿಯಾಗಿದ್ದಾರೆ.