ತಮಿಳು ನಟನಿಗೆ ಚಷ್ಮಾ ಸುಂದರಿ ಮೇಲೆ ಕ್ರಶ್

ಚೆನ್ನೈ: ರಶ್ಮಿಕಾ ಮಂದಣ್ಣ ಎಂದರೆ ಯಾವ ಹುಡುಗರಿಗೆ ತಾನೆ ಕಣ್ಣುಗಳು ಅರಳುವುದಿಲ್ಲ ಹೇಳಿ, ಅಷ್ಟರ ಮಟ್ಟಿಗೆ ಕಿರಿಕ್ ಬೆಡಗಿ ಯುವಕರ ಮನಸ್ಸನ್ನು ಕದ್ದಿದ್ದಾರೆ. ಈ ಹಿಂದೆ ಇವರಿಗೆ ಕರ್ನಾಟಕದ ಕ್ರಶ್ ಎಂದು ಸಹ ಹೇಳಲಾಗುತ್ತಿತ್ತು. ಇದೀಗ ಇವರು ಟಾಲಿವುಡ್, ಮಾಲಿವುಡ್‍ನಲ್ಲಿಯೂ ಮಿಂಚುತ್ತಿದ್ದು, ಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಅದೇ ರೀತಿ ಇದೀಗ ತಮಿಳಿನ ಸ್ಟಾರ್ ನಟರೊಬ್ಬರು ತಮ್ಮ ಕ್ರಶ್ ರಶ್ಮಿಕಾ ಮಂದಣ್ಣ ಎಂದು ಹೇಳಿಕೊಂಡಿದ್ದಾರೆ.

ಹೌದು ಚಷ್ಮಾ ಸುಂದರಿ ರಶ್ಮಿಕಾ ಮೇಲೆ ಇವರಿಗೆ ಕ್ರಶ್ ಆಗಿದೆಯಂತೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದು, ನನ್ನ ದೊಡ್ಡ ಕ್ರಶ್ ರಶ್ಮಿಕಾ ಮಂದಣ್ಣ ಎಂದಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾದಲ್ಲೇ `ಕರ್ನಾಟಕ ಕ್ರಶ್` ಎಂಬ ಬಿರುದು ಪಡೆದಿದ್ದರು. ನಂತರ ಹೆಚ್ಚು ಸಿನಿಮಾಗಳು ಬರಲು ಶುರುವಾದವು. ಅಲ್ಲದೆ ತೆಲುಗು ಹಾಗೂ ತಮಿಳಿನಲ್ಲೂ ಮಿಂಚುವ ಮೂಲಕ ಅಲ್ಲಿಯೂ ಅಭಿಮನಿಗಳನ್ನು ಹೊಂದಿದ್ದಾರೆ.

ಇದೀಗ ತಮಿಳು ಸ್ಟಾರ್ ನಟ ಹರೀಶ್ ಕಲ್ಯಾಣ್ ಅವರಿಗೆ ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಆಗಿದೆಯಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಅಭಿಮಾನಿಯೊಬ್ಬರು ನಿಮ್ಮ ಕ್ರಶ್ ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನ್ನ ದೊಡ್ಡ ಕ್ರಶ್ ರಶ್ಮಿಕಾ ಮಂದಣ್ಣ ಎಂದು ಹರೀಶ್ ಕಲ್ಯಾಣ್ ತಿಳಿಸಿದ್ದಾರೆ. ಹರೀಶ್ ತಮಿಳಿನ ಸ್ಟಾರ್ ನಟರಾಗಿದ್ದು, `ಸಿಂಧು ಸಮವೇಲಿ` ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ವಿಲ್ ಅಂಬು ಹಾಗೂ ಪ್ಯಾರ್ ಪ್ರೇಮ ಕಾದಲ್ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ ಚಿತ್ರೀಕರಣದ ಬಳಿಕ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದು, ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ರೊಮ್ಯಾನ್ಸ್ ಮಾಡಲು ಸಿದ್ಧವಾಗಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಈ ಕುರಿತು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ಈ ಮೂಲಕ ಮತ್ತೆ ಟಾಲಿವುಡ್‍ನಲ್ಲಿ ಬ್ಯುಸಿಯಾಗುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದ ಹೆಸರು ‘ಪುಷ್ಪ’. ಪೊಗರು ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಹೀಗಾಗಿ ಟಾಲಿವುಡ್ ಸಿನಿಮಾಗೆ ಸಹಿ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *