ತಮಿಳು ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಹ್ಮಣ್ಯಂ ನಿಧನ

ಮಿಳು ನಟ ಅಜಿತ್ ಕುಮಾರ್ (Ajith Kumar) ಅವರ ತಂದೆ ಶುಕ್ರವಾರದಂದು (ಮಾ.24) ಅಗಲಿದ್ದಾರೆ. 85 ವರ್ಷದ ಪಿ. ಸುಬ್ರಹ್ಮಣ್ಯಂ (P. Subramaniam) ಪಾರ್ಶ್ಚವಾಯುವಿನಿಂದ ಬಳಲುತ್ತಿದ್ದರು. ಅಜಿತ್ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ತಂದೆ ತುಂಬಾನೇ ಸಪೋರ್ಟ್ ಮಾಡಿದ್ದಾರೆಂದು ಹಲವು ಸಂದರ್ಶನದಲ್ಲಿ ನಟ ತಿಳಿಸಿದ್ದರು. ಇದನ್ನೂ ಓದಿ: ‘ಪರಿಮಳಾ ಡಿಸೋಜಾ’ ಚಿತ್ರದ 2ನೇ ಹಾಡು ರಿಲೀಸ್ ಮಾಡಿದ ಜಿ.ಟಿ ದೇವೇಗೌಡ

ಅಜಿತ್‌ ತಂದೆ ಸುಬ್ರಹ್ಮಣ್ಯಂ ಮೂಲತಃ ಕೇರಳದವರಾಗಿದ್ದು, ಚೆನ್ನೈನ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಪತ್ನಿ ಮೋಹಿನಿ ಮತ್ತು ಮೂವರು ಮಕ್ಕಳಾದ ಅನೂಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್‌ನ ಅಗಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಜಿತ್ ಅಭಿಮಾನಿಗಳು ಮತ್ತು ಸಿನಿಮಾ ಸ್ನೇಹಿತರು ಸಂತಾಪ ಸೂಚಿಸುತ್ತಿದ್ದಾರೆ. ನಟ ಅಜಿತ್ ಅವರು ಪತ್ನಿ ಮತ್ತು ಮಕ್ಕಳ ಯೂರೋಪ್‌ನಲ್ಲಿ ವೆಕೇಷನ್‌ನಲ್ಲಿದ್ದರು. ಸುದ್ದಿ ತಿಳಿದ ಕೂಡಲೇ ಅಜಿತ್ ಕುಟುಂಬ ಜೊತೆ ಚೆನ್ನೈಗೆ ಆಗಮಿಸಿದ್ದಾರೆ. ಅಂತಿಮ ಕಾರ್ಯದಲ್ಲಿ ನಟ ಭಾಗಿಯಾಗಿದ್ದಾರೆ.

ನಟ ಅಜಿತ್ ಕುಮಾರ್ ಮತ್ತು ಸಹೋದರರು ಜಾಯಿಂಟ್ ಸ್ಟೇಟ್ಮೆಂಟ್ ರಿಲೀಸ್ ಮಾಡಿದ್ದಾರೆ. ಪಿ.ಸುಬ್ರಹ್ಮಣ್ಯಂ ಮುಂಜಾನೆ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ತುಂಬಾ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 85 ವರ್ಷವಾಗಿತ್ತು. ನಿಮ್ಮ ಪ್ರೀತಿ ಮತ್ತು ಸಪೋರ್ಟ್‌ಗೆ ನಾವು ಎಂದೂ ಚಿರಋಣಿ. ಈ ಸಮಯದಲ್ಲಿ ನಮಗೆ ಬೆಂಬಲಿಸಿದ ವೈದ್ಯರಿಗೆ ಧನ್ಯವಾದಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *