ಹಾಸನ: ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ದಬ್ಬೆ ಚುಂಗನಹಳ್ಳಿ ಬಳಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ನವಿಲಹಳ್ಳಿ ಕಿಟ್ಟಿ ಎಂದು ಗುರುತಿಸಲಾಗಿದ್ದು, ಇವರು ತಾಲೂಕು ಪಂಚಾಯತ್ ಸದಸ್ಯರಾಗಿದ್ದಾರೆ. ಭಾನುವಾರ ರಾತ್ರಿ ಚುಂಗನಹಳ್ಳಿ ಸಮೀಪದ ಸಿಂಗಪುರ ಗ್ರಾಮದ ಬಳಿ ಕಿಟ್ಟಿ ಮರಳು ತುಂಬಿಸುತ್ತಿದ್ದ ಲಾರಿ ಬಳಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ವಿದ್ಯುತ್ ತಗುಲಿ ಕಿಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಿಟ್ಟಿ ಸಾವಿನಿಂದ ಆಕ್ರೋಶಗೊಂಡಿರುವ ಸಂಬಂಧಿಕರು ಇದು ಕೊಲೆ ಎಂದು ಆರೋಪಿಸಿದ್ದು, ವಿಕ್ರಮ್ ಕೌರಿ, ರಘು(ಅಪ್ಪಿ), ಶಶಿ, ಎಂಬವರಿಂದ ಈ ಕೃತ್ಯ ನಡೆದಿದೆ. ಇದು ಪೊಲೀಸರ `ಮಾಮೂಲಿ ದಂಧೆ’ಯಿಂದ ನಡೆದಿದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಎದುರು ಟಯರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.
ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗೆ ನಡೆಸುತ್ತಿದ್ದಾರೆ.






Leave a Reply