ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

ನವದೆಹಲಿ: ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಭವಿಷ್ಯದ ದಿನಗಳಲ್ಲಿ ಅಪರಾಧ ಎಂದು ಪರಿಗಣಿಸಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಂಸತ್‍ನಲ್ಲಿ ಪ್ರಕಟಿಸಿದ್ದಾರೆ.

ಆದರೆ ಈ ಬಗ್ಗೆ ಕೆಲ ಷರತ್ತುಗಳು ಅನ್ವಯವಾಗುತ್ತವೆ ಎಂದು ಗಡ್ಕರಿ ತಿಳಿಸಿದ್ದು, ಕಾರು ಚಾಲನೆ ಮಾಡುವಾಗ ಹ್ಯಾಂಡ್ ಫ್ರೀ ಡಿವೈಸ್ ಅಂದ್ರೆ ಬ್ಲೂಟೂತ್, ಇಯರ್‌ಫೋನ್ ಉಪಯೋಗಿಸಿ ಫೋನ್‍ನಲ್ಲಿ ಮಾತನಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲ್ಲ. ಆದರೆ ಆಗ ಚಾಲಕ ಫೋನನ್ನು ಕಾರಿನಲ್ಲಿಡದೇ ಜೇಬಲ್ಲಿ ಇಟ್ಟುಕೊಂಡಿರಬೇಕು. ಇದಕ್ಕೆ ಪೊಲೀಸರು ದಂಡ ವಿಧಿಸಬಾರದು. ಒಂದು ವೇಳೆ ಯಾರಾದ್ರೂ ದಂಡ ವಿಧಿಸಿದ್ರೆ ಇದನ್ನು ಕೋರ್ಟ್‍ನಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

ಈ ಸಂಬಂಧ ಕೆಲವೇ ದಿನಗಳಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ. ಈ ಹಿಂದೆ ಡ್ರೈವಿಂಗ್ ವೇಳೆ ಫೋನ್‍ನಲ್ಲಿ ಮಾತನಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಿದ್ದರು. ಆದರೆ ಇದೀಗ ಸರ್ಕಾರ ಈ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

Comments

Leave a Reply

Your email address will not be published. Required fields are marked *