ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಕಿತ್ತಾಟ- ಏಯ್ ಹೋಯ್ ಎಂದು ಅಶೋಕ್, ಅಶ್ವತ್ಥನಾರಾಯಣ್ ಮಾತಿನ ಚಕಮಕಿ..!

ಬೆಂಗಳೂರು: ಒಂದೇ ಒಂದು ವಿಚಾರಕ್ಕೆ ಬಿಜೆಪಿಯ ಇಬ್ಬರು ಬೆಂಗಳೂರು ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಧಾನಸಭೆಯ ಮೊಗಸಾಲೆಯಲ್ಲಿನ ಸಚಿವರ ವಿಶ್ರಾಂತಿ ಕೊಠಡಿಯಲ್ಲಿ ಬೆಂಗಳೂರು ಗದ್ದುಗೆಗಾಗಿ ವಾಕ್ಸಮರ ನಡೆದಿದೆ.

ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಲದಿಂದಲೂ ಇಬ್ಬರ ನಡುವೆ ಪೈಪೋಟಿ ಇತ್ತು. ಈಗ ಆ ಇಬ್ಬರು ಸಚಿವರ ನಡುವೆ ಮಹಾಕದನ ನಡೆದಿದೆ. ಆರ್.ಅಶೋಕ್ ವರ್ಸಸ್ ಅಶ್ವಥ್ ನಾರಾಯಣ್ ನಡುವೆ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವಿನ ಮಾತಿನ ಚಕಮಕಿ ಕಂಡು ಕೆಲ ಶಾಸಕರು, ಆಪ್ತ ಶಾಸಕರು ಅವಕ್ಕಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..?

ರಾಮನಗರ ಜಿಲ್ಲೆಯ ತಹಶೀಲ್ದಾರ್ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವರಿಬ್ಬರ ನಡುವೆ ಮನಸ್ತಾಪ ಇತ್ತು ಎನ್ನಲಾಗಿದೆ. ಜಿಲ್ಲೆಯ ಒಂದು ತಾಲೂಕಿನ ತಹಶೀಲ್ದಾರ್ ವರ್ಗಾವಣೆ ಮಾಡಲು ಅಶ್ವಥ್ ನಾರಾಯಣ್ ಬಿಗಿಪಟ್ಟು ಹಿಡಿದಿದ್ದಾರೆ. ಆದರೆ ತಹಶೀಲ್ದಾರ್ ವರ್ಗಾವಣೆ ಮಾಡದೇ ಅಶೋಕ್ ಇನ್ನೊಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮೂರು ಬಾರಿ ಹೇಳಿದ್ರೂ ತಹಶೀಲ್ದಾರ್ ವರ್ಗಾವಣೆ ಮಾಡಿಲ್ಲ ಎಂದು ಅಶ್ವಥ್ ನಾರಾಯಣ್ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..?

ಆತ ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಹಾಕಿಸಿರುವ ತಹಶೀಲ್ದಾರ್, ವರ್ಗಾವಣೆ ಸಾಧ್ಯವಿಲ್ಲ ಅಂತಾ ಅಶೋಕ್ ಹೇಳುತ್ತಿದ್ದಾರಂತೆ. ಆ ವರ್ಗಾವಣೆ ಕಾರಣಕ್ಕಾಗಿ ಇಬ್ಬರು ಸಚಿವರ ನಡುವೆ ವಾಕ್ಸಮರ ನಡೆದಿದೆ. ನಾನು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ, ನಾನು ಕೇಳಿದ್ರೂ ವರ್ಗಾವಣೆ ಮಾಡಲ್ಲ ಅಂದ್ರೆ ಹೇಗೆ…? ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹೇಗೆ ಅಂತಾ ಅಶ್ವಥ್ ನಾರಾಯಣ್ ಸಿಟ್ಟು ಪ್ರದರ್ಶನ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ವರ್ಗಾವಣೆಗಾಗಿ ಇಬ್ಬರು ಸಚಿವರಿಂದಲೇ ವಾಕ್ಸಮರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಟೆನ್ಶನ್ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *