ವಾಷಿಂಗ್ಟನ್: ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಠಿಣ ನಿಯಮಗಳನ್ನು ತೆಗೆದು ಹಾಕಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ) ಕರೆಯನ್ನು ತಾಲಿಬನ್ ತಿರಸ್ಕರಿಸಿದೆ
ಅಫ್ಘಾನಿಸ್ತಾನದ ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಯುಎನ್‌ಎಸ್‌ಸಿ ಕಳವಳ ವ್ಯಕ್ತಪಡಿಸಿದ್ದು, ಇದನ್ನು ತಾಲಿಬಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದ ಜನರು ಪ್ರಧಾನವಾಗಿ ಮುಸ್ಲಿಮರಾಗಿರುವುದರಿಂದ ನಮ್ಮ ಸರ್ಕಾರ ಇಸ್ಲಾಮಿಕ್ ಹಿಜಬ್ ಅನ್ನು ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಅನುಗುಣವಾಗಿ ಪರಿಗಣಿಸುತ್ತದೆ ಎಂದು ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಶೇ.87 ಮಂದಿಗೆ ಭಾರತದ ಪೌರತ್ವ
ಇತ್ತೀಚೆಗೆ ಭದ್ರತಾ ಮಂಡಳಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ನೀತಿಗಳನ್ನು ತಕ್ಷಣವೇ ತೆಗೆದುಹಾಕುವಂತೆ ತಾಲಿಬಾನ್‌ಗೆ ಸೂಚಿಸಿತ್ತು.

ಅಫ್ಘಾನ್ ಮಹಿಳೆಯರ ಶಿಕ್ಷಣ, ಉದ್ಯೋಗ, ಚಳುವಳಿಯ ಸ್ವಾತಂತ್ರ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಮೇಲೆ ತಾಲಿಬಾನ್ ವಿಧಿಸಿರುವ ನಿರ್ಬಂಧಗಳನ್ನು ಅನುಸರಿಸಿ ಅಲ್ಲಿನ ಹುಡುಗಿಯರು ಹಾಗೂ ಮಹಿಳೆಯರ ಬಗ್ಗೆ ಆಳವಾಗಿ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿತ್ತು. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ
ಇತ್ತೀಚೆಗೆ ತಾಲಿಬಾನ್ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೇರಿದ ನಿರ್ಬಂಧ, ಕಟ್ಟುನಿಟ್ಟಿನ ಹಿಜಬ್ ಜಾರಿ ಹಾಗೂ ರಾಜಕೀಯರಂಗದಿಂದ ಮಹಿಳೆಯರನ್ನು ದೂರ ಉಳಿಸಿದ ಸಂದರ್ಭದಲ್ಲಿ ಭದ್ರತಾ ಮಂಡಳಿ ತಕ್ಷಣವೇ ವಿದ್ಯಾರ್ಥಿನಿಯರಿಗೆ ಶಾಲೆಗಳನ್ನು ತೆರೆಯಲು ಸೂಚನೆ ನೀಡಿತ್ತು.

Leave a Reply