ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆ ನಿಷೇಧಿಸಿದ ತಾಲಿಬಾನ್‌

ಕಾಬೂಲ್: ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿಗಳನ್ನು ಬಳಸುವುದನ್ನು ನಿಷೇಧಿಸಿ ತಾಲಿಬಾನ್‌ ಆದೇಶ ಹೊರಡಿಸಿದೆ. ಈಗಾಗಲೇ ದುರ್ಬಲಗೊಂಡಿರುವ ಆರ್ಥಿಕ ಪರಿಸ್ಥಿತಿಯು ಈ ಆದೇಶದಿಂದ ಮತ್ತಷ್ಟು ಕುಂಠಿತಗೊಳ್ಳುವ ಸಾಧ್ಯತೆ ಇದೆ.

ಭಯೋತ್ಪಾದಕರ ಗುಂಪು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡಾಗಿನಿಂದ ಅಫ್ಘಾನ್‌ ರಾಷ್ಟ್ರೀಯ ಕರೆನ್ಸಿಯು ಮೌಲ್ಯ ಕಳೆದುಕೊಂಡಿದೆ.

ಅಫ್ಘಾನ್‌ ದೇಶದ ಆರ್ಥಿಕತೆಯು ಕ್ಷೀಣಿಸುತ್ತಿರುವಾಗ ಬ್ಯಾಂಕ್‌ಗಳು ನಗದು ಕೊರತೆಯನ್ನು ಎದುರಿಸುತ್ತಿವೆ. ಅಂತಾರಾಷ್ಟ್ರೀಯ ಸಮುದಾಯವು ತಾಲಿಬಾನ್‌ ಆಡಳಿತವನ್ನು ಸರ್ಕಾರವೆಂದು ಪರಿಗಣಿಸಲು ನಿರಾಕರಿಸಿದೆ. ಇದನ್ನೂ ಓದಿ: 5-11 ವಯಸ್ಸಿನ ಮಕ್ಕಳಿಗೆ ಫೈಜರ್‌ ಲಸಿಕೆ ನೀಡಲು ಅಮೆರಿಕ ಅನುಮೋದನೆ

ಇನ್ಮುಂದೆ ಯಾರಾದರೂ ವಿದೇಶಿ ಕರೆನ್ಸಿಯನ್ನು ದೇಶೀಯ ವ್ಯವಹಾರಕ್ಕೆ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಪ್ರತಿ ವ್ಯವಹಾರದಲ್ಲೂ ಅಫ್ಘಾನಿ ಕರೆನ್ಸಿ ಬಳಸುವ ಅಗತ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

ದೇಶದ ಎಲ್ಲಾ ನಾಗರಿಕರು, ಅಂಗಡಿಯವರು, ವ್ಯಾಪಾರಿಗಳು, ಉದ್ಯಮಿಗಳು ಅಫ್ಘಾನಿ ಕರೆನ್ಸಿಯನ್ನೇ ವ್ಯವಹಾರಕ್ಕೆ ಬಳಸಬೇಕು. ವಿದೇಶಿ ಕರೆನ್ಸಿ ಬಳಕೆ ನಿಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *