ಭಾರೀ ಮಳೆ; ತಾಜ್‌ಮಹಲ್‌ನ ಮುಖ್ಯ ಗುಂಬಜ್‌ನಲ್ಲಿ ಸೋರಿಕೆ – ವೀಡಿಯೋ ವೈರಲ್‌

ಲಕ್ನೋ: ಭಾರೀ ಮಳೆ ಹಿನ್ನೆಲೆಯಲ್ಲಿ ತಾಜ್‌ಮಹಲ್‌ನ (Taj Mahal) ಮುಖ್ಯ ಗುಂಬಜ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಆಗ್ರಾದ (Agra) ತಾಜ್‌ಮಹಲ್‌ನ ಮುಖ್ಯ ಗುಮ್ಮಟವು ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಸೋರಿಕೆಗೆ ಸಾಕ್ಷಿಯಾಗಿದೆ. ಇದು ಆವರಣದಲ್ಲಿರುವ ಉದ್ಯಾನವನ್ನು ಮುಳುಗಿಸಿದೆ. ಇದನ್ನೂ ಓದಿ: ಪ್ರಧಾನಿ ಮನೆಗೆ ಹೊಸ ಅತಿಥಿ ಆಗಮನ – ಕರುವನ್ನು ಎತ್ತಿ ಮುದ್ದಾಡಿದ ಮೋದಿ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಧಿಕಾರಿಯೊಬ್ಬರು, ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯಾಗಿದೆ. ಆದರೆ ಯಾವುದೇ ಹಾನಿ ಇಲ್ಲ ಎಂದು ತಿಳಿಸಿದ್ದಾರೆ.

ನಾವು ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ಸೋರಿಕೆಯನ್ನು ಗಮನಿಸಿದ್ದೇವೆ. ಪರಿಶೀಲನೆ ನಡೆಸಿದಾಗ ಸೋರಿಕೆಯಿಂದ ಉಂಟಾಗಿರುವುದು ಕಂಡುಬಂದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ನಾವು ಡ್ರೋನ್ ಕ್ಯಾಮೆರಾವನ್ನು ಬಳಸಿಕೊಂಡು ಗುಮ್ಮಟದ ಸ್ಥಿತಿಯನ್ನು ಪರಿಶೀಲಿಸಿದ್ದೇವೆ ಎಂದು ಎಎಸ್‌ಐನ ರಾಜ್‌ಕುಮಾರ್‌ ಪಾಟೀಲ್‌ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶನನ್ನು ಕಾಂಗ್ರೆಸ್‌ ಸರ್ಕಾರ ಪೊಲೀಸ್‌ ವ್ಯಾನ್ ಕಂಬಿ ಹಿಂದೆ ಹಾಕಿದೆ:‌ ಮೋದಿ ವಾಗ್ದಾಳಿ

ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನಗರದಾದ್ಯಂತ ಜಲಾವೃತವಾಗಿದೆ. ರಾಷ್ಟ್ರೀಯ ಹೆದ್ದಾರಿಯೊಂದು ಜಲಾವೃತಗೊಂಡಿದೆ. ಬೆಳೆಗಳು ಮುಳುಗಿವೆ.