ಶೌಚಾಲಯ ಕಟ್ಟಿಸ್ದಿದ್ರೆ ಪಡಿತರ ಧಾನ್ಯ ಕಟ್ ಎಂದಿದ್ದ ತಹಶೀಲ್ದಾರ್ ನಡೆಗೆ ಸಿಎಂ ಬೇಸರ, ಆದೇಶ ವಾಪಸ್

ರಾಯಚೂರು: ಅಕ್ಟೋಬರ್ 2, 2017ರ ಒಳಗೆ ಶೌಚಾಲಯ ಕಟ್ಟಿಸದವರ ಪಡಿತರ ಧಾನ್ಯ ರದ್ದುಗೊಳಿಸುವಂತೆ ಆದೇಶ ಹೊರಡಿಸಿದ್ದ ರಾಯಚೂರಿನ ಲಿಂಗಸುಗೂರು ತಹಶೀಲ್ದಾರ್ ನಡೆಗೆ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್‍ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆದೇಶ ಹಿಂಪಡೆದು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಲಿಂಗಸುಗೂರು ತಾಲೂಕನ್ನು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ಮಾಡಲು ಇಲ್ಲಿನ ತಹಶೀಲ್ದಾರ್ ಶಿವಾನಂದ್ ಸಾಗರ್ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಖಡಕ್ ಲಿಖಿತ ಆದೇಶ ನೀಡಿದ್ದರು. ಸೀಮೆ ಎಣ್ಣೆ ವಿತರಕರು ಸಹ ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳುವುದಾಗಿ ಆದೇಶಿಸಿದ್ದರು.

ರೋಹಿಣಿ ಮೋಹನ್ ಎಂಬವರು ಟ್ವಿಟ್ಟರ್‍ನಲ್ಲಿ ತಹಶೀಲ್ದಾರ್ ಕ್ರಮ ಖಂಡಿಸಿ ಆದೇಶ ಪ್ರತಿಯನ್ನ ಪ್ರಕಟಿಸಿದ್ದರು. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಆದೇಶ ಹಿಂಪಡೆಲು ಸೂಚಿಸುವುದಾಗಿ ಟ್ವೀಟ್ ಮಾಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್, ತಹಶೀಲ್ದಾರ್ ಶಿವಾನಂದ್ ಸಾಗರ್‍ಗೆ ಕೌನ್ಸಿಲಿಂಗ್ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಕೊನೆಗೆ ತಹಶೀಲ್ದಾರ್ ಪಡಿತರ ನಿಲ್ಲಿಸುವ ಆದೇಶ ಹಿಂಪಡೆದಿದ್ದಾರೆ.

 

Comments

Leave a Reply

Your email address will not be published. Required fields are marked *