ಬೆಂಗಳೂರು: ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ `ಟಗರು’ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಸೆಟ್ಟೇರಿದಾಗಿನಿಂದ ನಿರೀಕ್ಷೆಯನ್ನು ಕ್ರಿಯೇಟ್ ಮಾಡಿದ್ದ `ಟಗರು’, ಇಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.
ಜೋಗಿ ಸಿನಿಮಾದಲ್ಲಿ ನೋಡಿದ ಶಿವಣ್ಣನನ್ನು ಮತ್ತೆ ನೆನಪಿಸುವಂತಹ `ಟಗರು’ ಪಕ್ಕಾ ಮಾಸ್ ಫಿಲಂ ಆಗಿದ್ದು, ಸಿನಿಮಾದಲ್ಲಿ ಶಿವಣ್ಣ ಅವರು ಒಬ್ಬ ಪೊಲೀಸ್ ಅಧಿಕಾರಿಯಾಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸಿನಿಮಾದ ಹೆಸರಿನ ಟಗರಿನಂತೆ ಎಗರಿ ಎಗರಿ ಎದುರಾಳಿಗಳನ್ನು ಸದೇ ಬಡಿಯುತ್ತಾರೆ.

ಟಗರು ಪಕ್ಕಾ ಸಸ್ಪೆನ್ಸ್ ಸಿನಿಮಾವಾಗಿದ್ದು, ಅಭಿಮಾನಿಗಳಲ್ಲಿ ಕುತೂಲಹವನ್ನು ಮೂಡಿಸುವಂತಿದೆ. ಜೋಗಿ ಅಭಿಮಾನಿಗಳಿಗೆ ಪಕ್ಕಾ ಎಂಟರ್ ಟೈನ್ ಮೆಂಟ್ ಸಿಗಲಿದೆ. ಸೂರಿ ನಿರ್ದೇಶದಲ್ಲಿ ಸಿನಿಮಾ ಮೂಡಿ ಬಂದಿದ್ದು, ಸಿನಿಮಾದಲ್ಲಿ ರೌಡಿಗಳ ಅಟ್ಟಹಾಸ ಬಲು ಜೋರಾಗಿ ಸದ್ದು ಮಾಡಿದೆ.
ಪೊಲೀಸ್ ಪಾತ್ರ ಸೇರಿದಂತೆ ಹಲವಾರು ಗೆಟಪ್‍ಗಳಲ್ಲಿ ಶಿವಣ್ಣ ಮಿಂಚಿದ್ದರೆ, ಖಳನಾಯಕರ ಪಾತ್ರದಲ್ಲಿ ಧನಂಜಯ್ ಮತ್ತು ವಶಿಷ್ಠ ಸಿಂಹ ಅಭಿನಯಿಸಿದ್ದಾರೆ. ಇನ್ನು ಭಾವನಾ ಮೆನನ್ ಮತ್ತು ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿಯ ವೈಷ್ಣವಿ, ವೈಭವಿ ಚಿತ್ರಮಂದಿರದಲ್ಲಿ ಆರು ಗಂಟೆಗೆ ವಿಶೇಷ ಪ್ರದರ್ಶನವಾಗಿದ್ದು, ಟಗರು ಕಟೌಟ್ ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಿನಿಮಾವನ್ನು ಸ್ವಾಗತಿಸಿದ್ದಾರೆ. 6 ಗಂಟೆಯ ವಿಶೇಷ ಪ್ರದರ್ಶನಕ್ಕೆ ಮಹಿಳೆಯರು ಹೆಚ್ಚಾಗಿ ಬಂದಿರೋದು ಮತ್ತೊಂದು ವಿಶೇಷವಾಗಿದ್ದು, ಇನ್ನು ನಟರಾದ ಧನಂಜಯ್, ವಷಿಸ್ಟ, ನಟಿ ಮಾನ್ವಿತಾ ಅವರು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸುತ್ತಿದ್ದಾರೆ.
https://www.youtube.com/watch?v=scekni9K2Mg













Leave a Reply