Tag: Zydus Biotech

  • ಮೋದಿ ಲಸಿಕೆ ಪ್ರವಾಸ – ಗುಜರಾತಿನ ಅಹಮದಾಬಾದ್‍ಗೆ ಬಂದಿಳಿದ ಪ್ರಧಾನಿ

    ಮೋದಿ ಲಸಿಕೆ ಪ್ರವಾಸ – ಗುಜರಾತಿನ ಅಹಮದಾಬಾದ್‍ಗೆ ಬಂದಿಳಿದ ಪ್ರಧಾನಿ

    ಅಹಮದಾಬಾದ್: ಕೊರೊನಾ ಲಸಿಕೆ ಅಭಿವೃದ್ಧಿ ಪರಿಶೀಲನೆಗೆ ಇಂದು ಪ್ರಧಾನಿ ಮೋದಿಯವರು ಪ್ರವಾಸಗೈಗೊಂಡಿದ್ದು, ಸದ್ಯ ಗುಜರಾತಿನ ಅಹಮದಾಬಾದ್‍ಗೆ ಬಂದಿದ್ದಾರೆ.

    ಕೋವಿಡ್ ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಮೋದಿ ಇಂದು ಅಹಮದಾಬಾದ್‍, ಪುಣೆ ಮತ್ತು ಹೈದರಾಬಾದಿಗೆ ಪ್ರವಾಸಗೈಗೊಂಡಿದ್ದಾರೆ. ಈ ಪ್ರವಾಸದ ಅಂಗವಾಗಿ ಈಗ ಗುಜರಾತಿನ ಅಹಮದಾಬಾದ್‍ಗೆ ಬಂದಿರುವ ಮೋದಿಯವರು ಝೈಡಸ್ ಬಯೋಟೆಕ್ ಪಾರ್ಕ್ ಗೆ ಭೇಟಿ ನೀಡಲಿದ್ದಾರೆ.

    ಝೈಡಸ್ ಬಯೋಟೆಕ್ ಪಾರ್ಕ್ ಭೇಟಿಯ ನಂತರ ಇಂದು ಪ್ರಧಾನಿ ಹೈದರಾಬಾದ್‍ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆಯವರಿಗೂ ಲಸಿಕೆ ಪ್ರವಾಸದಲ್ಲಿ ಭಾಗಿಯಾಗಲಿರುವ ಮೋದಿ, ಇಂದು ಮಧ್ಯಾಹ್ನ ಹೈದರಾಬಾದ್‍ನ ಭಾರತ್ ಬಯೋಟೆಕ್ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಸಂಜೆ ವೇಳೆಗೆ ಪುಣೆಯ ಸೆರಮ್ ಸಂಸ್ಥೆಗೆ ತೆರಳಲಿದ್ದಾರೆ.

    ಇಂದು ಮೋದಿ ಭೇಟಿ ನೀಡಲಿರುವ ಕಂಪನಿಗಳ ಕೊರೊನಾ ಲಸಿಕೆ ಸಂಶೋಧನೆ ಮತ್ತು ಯಾವ ಹಂತಕ್ಕೆ ಬಂದಿವೆ ಎಂಬ ಮಾಹಿತಿ ನೀಡುವುದಾದರೆ, ಅಹಮದಾಬಾದ್‍ ಝೈಡಸ್ ಬಯೋಟೆಕ್ ಸಂಸ್ಥೆಯು ಝೈಕೋವಿ-ಡಿ ಎಂಬ ಕೋವಿಡ್ ಲಸಿಕೆಯನ್ನು ತಯಾರು ಮಾಡುತ್ತಿದೆ. ಸದ್ಯ ಈ ಕಾರ್ಯ 2ನೇ ಹಂತದಲ್ಲಿ ಇದ್ದು, ಜೂನ್ ಬಳಿಕವೇ ಲಸಿಕೆ ಸಿಗುವ ನಿರೀಕ್ಷೆ ಇದೆ.

    ಇದರ ಜೊತೆಗೆ ಹೈದರಾಬಾದ್‍ನ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಕಂಪನಿ ಸೇರಿ ಜಂಟಿಯಾಗಿ ಉತ್ಪಾದನೆ ಮಾಡುತ್ತಿರುವ ಕೊವ್ಯಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗ ನಡೆಸುತ್ತಿದೆ. ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಕ್ಸ್ ಫರ್ಡ್ ವಿವಿ ಸಹಭಾಗಿತ್ವದಲ್ಲಿ ಆಸ್ಟ್ರಾಜೆನಿಕಾ ಎಂಬ ಕೊರೊನಾ ಲಸಿಕೆಯನ್ನು ತಯಾರು ಮಾಡುತ್ತಿದ್ದು, 3ನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ.