Tag: Zoom App

  • ಅ.2 ರಂದು ರಾಜ್ಯಾದ್ಯಂತ `ಗಾಂಧಿ ನಡಿಗೆ’; ಒಂದು ವರ್ಷ ಕಾರ್ಯಕ್ರಮ ಆಯೋಜನೆ – ಡಿಕೆಶಿ

    ಅ.2 ರಂದು ರಾಜ್ಯಾದ್ಯಂತ `ಗಾಂಧಿ ನಡಿಗೆ’; ಒಂದು ವರ್ಷ ಕಾರ್ಯಕ್ರಮ ಆಯೋಜನೆ – ಡಿಕೆಶಿ

    – ಸ್ವಚ್ಛತೆಯ ಪ್ರತಿಜ್ಞಾವಿಧಿ ಸ್ವೀಕಾರ

    ಬೆಂಗಳೂರು: ಅ.2 ರಂದು ರಾಜ್ಯಾದ್ಯಂತ `ಗಾಂಧಿ ನಡಿಗೆ’ ಹಾಗೂ `ಸ್ವಚ್ಛತೆಯ ಪ್ರತಿಜ್ಞಾ ಸ್ವೀಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

    ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು (Mahatma Gandhi) ಬೆಳಗಾವಿಯಲ್ಲಿ (Belagavi) ಸ್ವಾತಂತ್ರ‍್ಯ ಸಂಗ್ರಾಮದ ನೇತೃತ್ವ ವಹಿಸಿಕೊಂಡು 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಾರ್ಯಕ್ರಮದ ಮೊದಲ ಭಾಗವಾಗಿ ಅ.2 ಗಾಂಧಿ ಜಯಂತಿಯಂದು 1 ಕಿ.ಮೀ. ‘ಗಾಂಧಿ ನಡಿಗೆ’ ಮತ್ತು ‘ಸ್ವಚ್ಛತಾ ಪ್ರತಿಜ್ಞಾ ಸ್ವೀಕಾರ’ ಅಭಿಯಾನ ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರ ಹಾಗೂ ಪಾಲಿಕೆ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವ್ರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಪ್ರದೀಪ್ ಈಶ್ವರ್

    ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ನಡಿಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದಿದ್ದಾರೆ.

    500 ಶಾಲಾ ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾವಿಧಿ:
    ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ (Lal Bahadur Shastri) ಇಬ್ಬರ ಜನ್ಮದಿನವೂ ಒಂದೇ ದಿನ ಆಗಿರುವ ಕಾರಣ ಇಬ್ಬರ ಪ್ರತಿಮೆಗೂ ಮಾಲಾರ್ಪಣೆ ಮಾಡಲಾಗುವುದು. ನಂತರ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಬೆಂಗಳೂರಿನ 500 ಶಾಲಾ, ಕಾಲೇಜು ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಗುವುದು. ಇದು ಸರ್ಕಾರದ ಕಾರ್ಯಕ್ರಮ, ಗಾಂಧಿ ಅವರ ಆದರ್ಶವನ್ನು ಯುವ ಪೀಳಿಗೆಗೆ ತಲುಪಿಸಲು ಈ ಕಾರ್ಯಕ್ರಮ ರೂಪಿಸಿದೆ ಎಂದರು.

    ಶ್ವೇತ ವಸ್ತ್ರ ಧರಿಸಿ ನಡಿಗೆ:
    ಜಿಲ್ಲಾ ಕೇಂದ್ರದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ. ಈ ನಡಿಗೆ ವೇಳೆ ಬಿಳಿ ವಸ್ತ್ರ, ಗಾಂಧಿ ಟೋಪಿ ಧರಿಸಿ ಹೆಜ್ಜೆ ಹಾಕುವಂತೆ ಮನವಿ ಮಾಡಲಾಗುವುದು. ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಿದ್ದು, ಇಡೀ ವರ್ಷ ಗಾಂಧೀಜಿ ಅವರ ಆಚಾರ ವಿಚಾರವನ್ನು ಯುವ ಪೀಳಿಗೆಗೆ ತಿಳಿಸಲು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಮೈಸೂರು ದಸರಾದಲ್ಲಿ ತುತ್ತೂರಿ ಬ್ಯಾನ್

    ಪ್ರತಿಜ್ಞಾ ವಿಧಿಗಾಗಿ ಆಪ್ ಮೂಲಕ ನೋಂದಣಿ:
    ರಾಜ್ಯದಲ್ಲಿ ಸಾರ್ವಜನಿಕರು ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲು ಒಂದು ಆಪ್ ಸಿದ್ಧಪಡಿಸಲಾಗಿದ್ದು, ಈಗಾಗಲೇ 35 ಸಾವಿರ ಮಂದಿ ಈ ಆಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಜ್ಞಾ ವಿಧಿ ಪಡೆದವರಿಗೆ ಆನ್‌ಲೈನ್‌ನಲ್ಲೇ ಪ್ರಮಾಣಪತ್ರ ನೀಡಲಾಗುವುದು. ಇದು ಮೊದಲ ಹಂತದ ಕಾರ್ಯಕ್ರಮವಾಗಿದ್ದು, ಇಡೀ ವರ್ಷ ಬೇರೆ ಬೇರೆ ಕಾರ್ಯಕ್ರಮ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

  • ಝೂಮ್ ಆ್ಯಪ್ ಮೀಟಿಂಗ್ – ಕ್ಯಾಮೆರಾ ಆಫ್ ಮಾಡದೆ ಮಹಿಳಾ ಕಾರ್ಯದರ್ಶಿಯ ಜೊತೆ ಅಧಿಕಾರಿ ಸೆಕ್ಸ್

    ಝೂಮ್ ಆ್ಯಪ್ ಮೀಟಿಂಗ್ – ಕ್ಯಾಮೆರಾ ಆಫ್ ಮಾಡದೆ ಮಹಿಳಾ ಕಾರ್ಯದರ್ಶಿಯ ಜೊತೆ ಅಧಿಕಾರಿ ಸೆಕ್ಸ್

    – ಕ್ಯಾಮೆರಾ ಆಫ್ ಮಾಡಲು ಹೋಗಿ ಬೇರೆ ಬಟನ್ ಒತ್ತಿದ
    – ಲೈವ್ ಮೀಟಿಂಗ್‍ನಲ್ಲೇ ಸೆಕ್ಸ್ ಮಾಡಿ ಮತ್ತೆ ಸಭೆಗೆ ಹಾಜರಾದ

    ಮಲಿನಾ: ಸರ್ಕಾರಿ ಅಧಿಕಾರಿಯೊಬ್ಬ ಕೆಲಸದ ನಿಮಿತ್ತ ಝೂಮ್ ಆ್ಯಪ್ ಮೂಲಕ ಆನ್‍ಲೈನ್‍ ಮೀಟಿಂಗ್‍ನಲ್ಲಿ ಭಾಗಿಯಾಗಿದ್ದ ವೇಳೆಯೇ ತನ್ನ ಕಾರ್ಯದರ್ಶಿಯೊಂದಿಗೆ ಸೆಕ್ಸ್ ಮಾಡಿರುವ ಘಟನೆ ಫಿಲಿಪ್ಪೀನ್ಸ್‌‌ನಲ್ಲಿ ನಡೆದಿದೆ.

    ಕ್ಯಾವೈಟ್ ಪ್ರಾಂತ್ಯದ ಫಾತಿಮಾ ಡಾಸ್ ಗ್ರಾಮ ಸದಸ್ಯ ಕ್ಯಾಪ್ಟನ್ ಜೀಸಸ್ ಎಸ್ಟಿಲ್ ಕ್ಯಾಮೆರಾ ಆನ್ ಆಗಿರುವುದನ್ನು ತಿಳಿಯದೆ ತನ್ನ ಕಾರ್ಯದರ್ಶಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆನ್‍ಲೈನ್‍ನಲ್ಲಿ ಮೀಟಿಂಗ್ ನಡೆಯುತ್ತಿದ್ದರೂ ಸರ್ಕಾರಿ ಅಧಿಕಾರಿ ತನ್ನ ಕಾರ್ಯದರ್ಶಿಯ ಜೊತೆ ಸೆಕ್ಸ್ ಮಾಡಿರುವುದನ್ನು ಕಾಣಬಹುದಾಗಿದೆ.

    ಝೂಮ್ ವಿಡಿಯೊ ಕಾನ್ಫರೆನ್ಸ್ ಆ್ಯಪ್ ಆಗಿದ್ದು, ಕೆಲಸಕ್ಕೆ ಸಂಬಂಧಿಸಿದಂತೆ ಆನ್‍ಲೈಲ್ ಮೂಲಕ ಮೀಟಿಂಗ್ ನಡೆಸಲಾಗುತ್ತದೆ. ಅದೇ ರೀತಿ ಆಗಸ್ಟ್ 26 ರಂದು ಕ್ಯಾಪ್ಟನ್ ಜೀಸಸ್ ಎಸ್ಟಿಲ್ ಕೆಲಸದ ನಿಮಿತ್ತ ಝೂಮ್ ಆ್ಯಪ್ ಮೂಲಕ ಮೀಟಿಂಗ್‍ನಲ್ಲಿ ಭಾಗವಹಿಸಿದ್ದನು. ಸ್ವಲ್ಪ ಸಮಯದ ನಂತರ ಎಸ್ಟಿಲ್ ಬ್ರೇಕ್ ತೆಗೆದುಕೊಂಡಿದ್ದಾನೆ. ಆಗ ಆತನ ಕಾರ್ಯದರ್ಶಿ ರೂಮಿಗೆ ಬಂದಿದ್ದಾಳೆ.

    ಈ ವೇಳೆ ಎಸ್ಟಿಲ್ ಝೂಮ್ ಕ್ಯಾಮೆರಾ ಆಫ್ ಮಾಡಲು ಹೋಗಿ ಬೇರೆ ಬಟನ್ ಒತ್ತಿದ್ದಾನೆ. ಹೀಗಾಗಿ ಕ್ಯಾಮೆರಾ ಆನ್ ಆಗಿತ್ತು. ಆದರೆ ಎಸ್ಟಿಲ್ ಕ್ಯಾಮೆರಾ ಆನ್ ಆಗಿದೆ ಎಂದು ತಿಳಿಯದೆ ಮಹಿಳೆಯೊಂಧಿಗೆ ಸೆಕ್ಸ್ ಮಾಡಿದ್ದಾನೆ. ಮೀಟಿಂಗ್‍ನಲ್ಲಿ ಭಾಗವಹಿಸಿದ್ದ ಇತರರು ಸಭೆಯಲ್ಲಿ ಚರ್ಚೆ ಮಾಡುತ್ತಿದ್ದರು. ಕಾರ್ಯದರ್ಶಿಯ ಜೊತೆ ಸೆಕ್ಸ್ ಮಾಡಿದ ನಂತರ ಎಸ್ಟಿಲ್ ಮತ್ತೆ ಆನ್‍ಲೈನ್ ಮೀಟಿಂಗ್‍ಗೆ ಸೇರಿಕೊಂಡಿದ್ದಾನೆ.

    ಇದೇ ವೇಳೆ ಮೀಟಿಂಗ್‍ನಲ್ಲಿ ಹಾಜರಾಗಿದ್ದ ಸಿಬ್ಬಂದಿಯೊಬ್ಬರು ಎಸ್ಟಿಲ್ ಸೆಕ್ಸ್ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮ ಸದಸ್ಯನ ವಿರುದ್ಧ ಕೆಲ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಕ್ಷಮೆ ಕೇಳಿದ್ದಾರೆ. ಆದರೂ ಗ್ರಾಮಸ್ಥರು ದೂರಿನ ಅನ್ವಯ ದೇಶದ ಆಂತರಿಕ ಮತ್ತು ಸ್ಥಳೀಯ ಸರ್ಕಾರದ ಇಲಾಖೆ ಎಸ್ಟಿಲ್‍ನಲ್ಲಿ ಆತನ ಕೆಲಸದಿಂದ ವಜಾಗೊಳಿಸಲಾಗಿದೆ.