Tag: zoo keeper

  • ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ

    ಥಾಯ್ಲೆಂಡ್‌ನಲ್ಲಿ ಝೂ ಸಿಬ್ಬಂದಿಯನ್ನೇ ಕೊಂದು ತಿಂದ ಸಿಂಹಪಡೆ

    ಬ್ಯಾಂಕಾಕ್: ಥಾಯ್ಲೆಂಡ್‌ನ (Thailand) ಮೃಗಾಲಯದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಸಫಾರಿ (Safari) ಜೀಪ್‌ನಿಂದ ಇಳಿದ ಸಿಬ್ಬಂದಿಯನ್ನೇ ಸಿಂಹಗಳ (Lions) ಗುಂಪು ಎಳೆದೊಯ್ದು ಕೊಂದು ತಿಂದು ಹಾಕಿವೆ.

    ಬ್ಯಾಂಕಾಕ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ಈ ಭೀಕರ ಘಟನೆ ನಡೆದಿದೆ. ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಎದುರೇ ಸಿಂಹಗಳ ಗುಂಪೊಂದು ಮೃಗಾಲಯದ ಪಾಲಕ ಜಿಯಾನ್ ರಂಗ್ಖರಸಾಮೀ ಎಂಬಾತನ ಮೇಲೆ ಸಿಂಹಗಳ ಹಿಂಡೊಂದು ದಾಳಿ ನಡೆಸಿ ಕೊಂದು ಹಾಕಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಈ ಭೀಕರ ಘಟನೆಗೆ ನೂರಾರು ಪ್ರವಾಸಿಗರು ಸಾಕ್ಷಿಯಾಗಿದ್ದರು. ಅಲ್ಲದೆ ಕೆಲವರು ತಮ್ಮ ಮೊಬೈಲ್‌ನಲ್ಲಿ ಈ ಭೀಕರ ವೀಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ: ನೇಪಾಳ ಪ್ರಧಾನಿ

    ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ಕುರಿತು ಆಘಾತ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್ ಆಡಳಿತ ಮಂಡಳಿ ಮೃತ ಸಿಬ್ಬಂದಿಯ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಅಲ್ಲದೆ ಮೃಗಾಲಯದಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಇದನ್ನೂ ಓದಿ: ಅಸ್ಸಾಂನ ಗುವಾಹಟಿಯಲ್ಲಿ 5.8 ತೀವ್ರತೆಯ ಭೂಕಂಪ – ಉತ್ತರ ಬಂಗಾಳ, ಭೂತಾನ್‌ನಲ್ಲೂ ಕಂಪನ

  • ವಿಡಿಯೋ: ತಾನು ಸಾಕಿದ ಹುಲಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ ತರಬೇತುದಾರ

    ವಿಡಿಯೋ: ತಾನು ಸಾಕಿದ ಹುಲಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ ತರಬೇತುದಾರ

    ಬೀಜಿಂಗ್: ಹುಲಿಯೊಂದು ತನ್ನನ್ನು ಸಾಕಿದ ಮೃಗಾಲಯದ ಸಿಬ್ಬಂದಿಯನ್ನೇ ಕೊಂದಿರುವ ಘಟನೆ ಚೀನಾದಲ್ಲಿ ನಡೆದಿದೆ.

    ಕಳೆದ ಭಾನುವಾರ ಇಲ್ಲಿನ ಫುಝೌ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಮೃಗಾಲಯದ ಸಿಬ್ಬಂದಿಯಾದ ವೂ ಪ್ರಾಣಿಗಳಿಗೆ ತರಬೇತಿ ನೀಡಲು ಬಳಸುವ ಬೋನಿನೊಳಗೆ ಹುಲಿಯೊಂದಿಗೆ ಇದ್ದರು. ಯಾವಾಗ್ಲೂ ಶಾಂತವಾಗಿರುತ್ತದೆ ಹುಲಿ ಅಂದು ಇದ್ದಕ್ಕಿದ್ದಂತೆ ವೂ ಅವರಿಗೆ ಕಚ್ಚಿದ್ದು, ಅವರು ಉಸಿರುಗಟ್ಟಿ ಸಾವನ್ನಪ್ಪಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಫುಜೌ ಸಿಬ್ಬಂದಿಯಾಗಿದ್ದ ವೂ, ಹುಲಿ ಮರಿಯಾಗಿದ್ದಾಗಿನಿಂದಲೂ ಅದರ ಆರೈಕೆ ಮಾಡಿದ್ದರು. ದೀರ್ಘ ಕಾಲ ಮಾನವನೊಂದಿಗೆ ಒಡನಾಟದಲ್ಲೇ ಹುಲಿಯನ್ನ ಸಾಕಲಾಗಿತ್ತು ಎಂದು ವರದಿಯಾಗಿದೆ.

    ಈ ಘಟನೆಯನ್ನ ಪ್ರತ್ಯಕ್ಷದರ್ಶಿಗಳು ವಿಡಿಯೋ ಮಾಡಿದ್ದು, ಸಾವನ್ನಪ್ಪಿದ ತನ್ನ ತರಬೇತುದಾರನ ದೇಹದ ಬಳಿ ಹುಲಿ ನಿಂತಿರೋದನ್ನ ಕಾಣಬಹುದು. ಪೊಲೀಸರಿಗೆ ಕರೆ ಮಾಡಿ ಎಂದು ಅಲ್ಲಿದ್ದವರು ಕಿರುಚೋದನ್ನೂ ವಿಡಿಯೋದಲ್ಲಿ ಕೇಳಬಹುದು.

    ಮತ್ತೊಂದು ವಿಡಿಯೋದಲ್ಲಿ ಹುಲಿ ವೂ ಅವರ ಮೇಲೆ ದಾಳಿ ಮಾಡುತ್ತಿದ್ದು, ಇತರೆ ಸಿಬ್ಬಂದಿ ಕೋಲಿನಿಂದ ಅದನ್ನ ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದ್ರೆ ಅವರ ಪ್ರಯತ್ನ ವಿಫಲವಾಗಿದ್ದು ವೂ ಹುಲಿಯ ದಾಳಿಯಿಂದ ಕೊನೆಯುಸಿರೆಳೆದಿದ್ದಾರೆ.

    https://www.youtube.com/watch?v=4YHvEvfzDp4