Tag: Zoe Saldana

  • ಕನ್ನಡದಲ್ಲೂ ಬರಲಿದೆ ಹಾಲಿವುಡ್ ‘ಅವತಾರ್’: ದಿ ವೇ ಆಫ್ ವಾಟರ್

    ಕನ್ನಡದಲ್ಲೂ ಬರಲಿದೆ ಹಾಲಿವುಡ್ ‘ಅವತಾರ್’: ದಿ ವೇ ಆಫ್ ವಾಟರ್

    ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡಿರುವ ಹಾಲಿವುಡ್ ‘ಅವತಾರ್’ ಸಿನಿಮಾದ ಸೀಕ್ವೆಲ್ ಇದೇ ಡಿಸೆಂಬರ್ ನಲ್ಲಿ ತೆರೆ ಕಾಣುತ್ತಿದೆ. ಮೊನ್ನೆಯಷ್ಟೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅತೀ ನಿರೀಕ್ಷೆಯಿಂದ ಕಾಯುತ್ತಿದ್ದ ನೋಡುಗರ ಕಣ್ಣುಗಳನ್ನು ಅವತಾರ್ ದೃಶ್ಯ ವೈಭವ ಮತ್ತಷ್ಟು ರಂಗಾಗಿಸಿದೆ.

    2009ರಲ್ಲಿ ಅವತಾರ್ ಮೊದಲ ಭಾಗ ರಿಲೀಸ್ ಆಗಿತ್ತು. ದೊಡ್ಡಮಟ್ಟದಲ್ಲಿ ಆ ಸಿನಿಮಾ ಸಕ್ಸಸ್ ಆಗಿತ್ತು. ಈವರೆಗೂ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾದಷ್ಟು ಯಾವ ಚಿತ್ರವೂ ಕಲೆಕ್ಷನ್ ಆಗಿಲ್ಲ ಎನ್ನುವ ದಾಖಲೆ ಮಾಡುವಷ್ಟು ಹಣ ತಂದುಕೊಟ್ಟಿತ್ತು. ಅವತಾರ್ ಸೀಕ್ವೆಲ್ ಕೂಡ ಅದೇ ಹಾದಿಯನ್ನೇ ಹಿಡಿಯಲಿದೆ ಎನ್ನುತ್ತಿದೆ ಟ್ರೈಲರ್. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಈಗ ಬರುತ್ತಿರುವ ಅವತಾರ್ ಸಿನಿಮಾಗೆ ‘ದಿ ವೇ ಆಫ್ ವಾಟರ್’ ಟ್ಯಾಗ್ ಲೈನ್ ಕೊಟ್ಟಿದ್ದು, ಬಹುತೇಕ ಸಿನಿಮಾ ನೀರಿನ ಬ್ಯಾಕ್ ಡ್ರಾಪ್ ನಲ್ಲೇ ಮೂಡಿ ಬಂದಿದೆ ಎನ್ನುವಂತಿದೆ ಬಿಡುಗಡೆಗೊಂಡ ಟ್ರೈಲರ್.  3ಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಭಾರತೀಯ ನಾನಾ ಭಾಷೆಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಮತ್ತೊಂದು ಖುಷಿಯ ಸಂಗತಿ ಎಂದರೆ, ಈ ಬಾರಿ ಅವತಾರ್ ಚಿತ್ರವನ್ನು ಕನ್ನಡದಲ್ಲೂ ನೋಡಬಹುದು ಎಂದಿದೆ ಚಿತ್ರತಂಡ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಬರೋಬ್ಬರಿ 13 ವರ್ಷಗಳ ಬಳಿಕ ಅವತಾರ್ ಸರಣಿ ಮೂಡಿ ಬಂದಿದ್ದು, ಪ್ರೇಕ್ಷಕರು ಈಗಿನಿಂದಲೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಒಟ್ಟು ಐದು ಸರಣಿಯಲ್ಲಿ ಈ ಸಿನಿಮಾ ತಯಾರಾಗಲಿದ್ದು, ಎರಡನೇ ಭಾಗ 2022 ಡಿಸೆಂಬರ್ ನಲ್ಲಿ ಬಂದರೆ, 3ನೇ ಸರಣಿ 2024 ಡಿಸೆಂಬರ್ ನಲ್ಲಿ, 4ನೇ ಸರಣಿ 2026 ಡಿಸೆಂಬರ್ ಹಾಗೂ 5ನೇ ಸರಣಿಯು 2028 ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ ಎಂದಿದ್ದಾರೆ ಚಿತ್ರದ ನಿರ್ಮಾಪಕರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಸಾರ್ವಕಾಲಿಕ ಅತೀ ಹೆಚ್ಚು ಹಣ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾದಲ್ಲಿ ಸ್ಯಾಂಮ್ ವರ್ಥಿಂಗ್ಟನ್, ಜೋಯ್ ಸಲ್ಡಾನಾ, ಸ್ಟೀಫನ್ ಲ್ಯಾಂಗ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.