Tag: Zilla Panchayath

  • ಕುಡಿಯುವ ನೀರು ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಜಿ.ಪಂ. ನಿರ್ಣಯ

    ಕುಡಿಯುವ ನೀರು ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ: ಜಿ.ಪಂ. ನಿರ್ಣಯ

    ಶಿವಮೊಗ್ಗ: ಬೇಸಿಗೆಯಲ್ಲಿ ಪ್ರತಿಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಅಂತಹ ಜಿಲ್ಲೆಯ ಹಳ್ಳಿಗಳಿಗೆ ನದಿಗಳಿಂದ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯ್ತಿ ನಿರ್ಣಯ ಕೈಗೊಂಡಿತು.

    ಜಿ.ಪಂ.ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ವಿಷಯ ಚರ್ಚೆಗೆ ಬಂದು ಅಂತಿಮವಾಗಿ ಈ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ ಕೆಲ ಭಾಗಗಳಲ್ಲಿ ಬೇಸಿಗೆಯಲ್ಲಿ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಕೊಳವೆ ಬಾವಿಗಳ ಮೂಲಕ ನೀರಿನ ಬೇಡಿಕೆ ನೀಗಿಸಲು ಸಾಧ್ಯವಾಗುತ್ತಿಲ್ಲ. ನದಿಗಳ ಮೂಲಕ ನೀರು ಪೂರೈಸುವ ಬಹುಗ್ರಾಮ ಯೋಜನೆಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

    ಎಲ್ಲೆಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರಬಹುದು ಎಂಬುದನ್ನು ಗುರುತಿಸಿ ವರದಿ ಸಲ್ಲಿಸುವಂತೆ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ವೇದ ವಿಜಯಕುಮಾರ್, ಸಿಇಒ ವೈಶಾಲಿ ಹಾಜರಿದ್ದರು.

  • ನನಗೆ ಶಾಸಕರೇ ದೇವರು, ಅವ್ರು ಹೇಳಿದ್ರೆ ಹೋಗ್ತಿನಿ: ಸಿಡಿಪಿಓ ಉದ್ಧಟತನ

    ನನಗೆ ಶಾಸಕರೇ ದೇವರು, ಅವ್ರು ಹೇಳಿದ್ರೆ ಹೋಗ್ತಿನಿ: ಸಿಡಿಪಿಓ ಉದ್ಧಟತನ

    ಕೊಪ್ಪಳ: ಜಿಲ್ಲೆಯ ಕನಕಗಿರಿಯ ಮಕ್ಕಳ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ(ಸಿಡಿಪಿಓ)ಯೊಬ್ಬ ನನಗೆ ಶಾಸಕರೇ ದೇವರು, ಅವರು ಹೇಳಿದರೇ ಮಾತ್ರ ಇಲ್ಲಿಂದ ಹೋಗುತ್ತೇನೆಂದು ದರ್ಪ ಮೆರೆಯುತ್ತಿದ್ದಾರೆ.

    ಹೌದು, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಕನಕಗಿರಿ ಶಾಸಕ ಬಸವರಾಜ್ ದಡೇಸುಗುರು ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇವರ ಹೆಸರನ್ನು ಹೇಳಿಕೊಂಡು ಸಿಡಿಪಿಓ ಅಧಿಕಾರಿಯೊಬ್ಬ ದರ್ಪ ಮೆರೆಯುತ್ತಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆ ಕನಕಗಿರಿ ಸಿಡಿಪಿಓ ಆಗಿ ಕೆಲಸ ಮಾಡುತ್ತಿದ್ದ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಅವರನ್ನು ಜಿಲ್ಲಾ ಪಂಚಾಯತ್ ಸಿ.ಇ.ಓ ವೆಂಕಟ್ ರಾಜು ವರ್ಗಾವಣೆ ಮಾಡಿದ್ದರು. ಅಲ್ಲದೆ ಆ ಜಾಗಕ್ಕೆ ವಿನಾಯಕ ಅಗಸಿಯವರನ್ನು ನೇಮಕ ಮಾಡಿದ್ದರು. ಆದರೆ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಮಾತ್ರ ಸಿಇಓ ಆದೇಶವನ್ನು ಧಿಕ್ಕರಿಸಿ ವಿನಾಯಕ್‍ಗೆ ಅಧಿಕಾರ ಹಸ್ತಾಂತರ ಮಾಡಿಲ್ಲ. 1 ತಿಂಗಳಿಂದ ವಿನಾಯಕ್‍ಗೆ ಯಾವುದೇ ರಿಜಿಸ್ಟರ್ ನೀಡದೆ ಸಿಡಿಪಿಓ ಕಚೇರಿಯ ಬೀಗ ಹಾಕಿಕೊಂಡು ತಿರುಗಾಡುತ್ತಿದ್ದಾರೆ.

    ರೌಡಿಗಳ ಮೂಲಕವೂ ಬೆದರಿಕೆ ಹಾಕುವ ಕೆಲಸಕ್ಕೆ ವಿರೂಪಾಕ್ಷಿ ಮುಂದಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ವ್ಯಕ್ತಿಯೊಬ್ಬರ ಜೊತೆ ಫೋನ್ ಸಂಭಾಷಣೆಯಲ್ಲಿ ಮಾತನಾಡಬೇಕಾದರೆ, ನನಗೆ ಶಾಸಕರ ಬೆಂಬಲವಿದೆ. ಅವರು ಹೇಳಿದರೆ ಮಾತ್ರ ನಾನು ಇಲ್ಲಿಂದ ಹೋಗುತ್ತೀನಿ ಎಂದು ದರ್ಪದಿಂದ ಮಾತನಾಡಿದ್ದಾರೆ. ಇಷ್ಟೆಲ್ಲಾ ಆದರೂ ಶಾಸಕ ಬಸವರಾಜ್ ದಡೇಸುಗೂರು ಮಾತ್ರ ವಿರೂಪಾಕ್ಷಿಯನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ.

    ಆಡಿಯೋ ಸಂಭಾಷಣೆಯಲ್ಲಿ ಏನಿದೆ?
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೆನ್ ಸಿಎಮ್ಮಾ? ಇಲ್ಲಾ ವರ್ಲ್ಡ್ ಫೇಮಸ್ಸಾ? ಏನ್ ಹೇಳ್ರಿ, ಅವರೇನ್ ಹೇಳ್ರಿ? ನನಗೇನು ಗೊತ್ತಿಲ್ಲ. ನಮ್ಮ ಮನ್ಯಾಗ ಯಾರು ರಾಜಕೀಯದವ್ರಿಲ್ಲ, ಯಾರು ಲಾಯರ್ ಇಲ್ಲ. ನಮ್ಮ ಮನೇಲಿ ಸಿಬಿಐ ಆಫೀಸರ್ ಆಗಿ ರಿಟೈರ್ಡ್‍ಮೆಂಟ್ ಆಗ್ಯಾರಾ. ಸಿಬಿಐ ಇಲಾಖೆದಾಗ.
    ಬಸವರಾಜ್ ಪೊನ್ನಾಪುರ: ಹ..ಹ..
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೇನ್ ಹುಲಿ ಕಟ್ಯಾರ. ಕರಡಿ ಕಟ್ಯಾರ. ಏನ್ರೀ ಏನ್ಮಾಡ್ತಾರ್ ಹೇಳ್ರಿ.
    ಬಸವರಾಜ್ ಪೊನ್ನಾಪುರ: ಇವಾಗ ನಾವ್ ಬೆಂಬಲ ಮಾಡ್ಬೇಕಲ್ಲ. ನಾನ್ ಯಾರಾದ್ರೂ ಒಬ್ರು ಹೊಂದಾಣಿಕೆ ಮಾಡಿಕೊಂಡಿ ಹೋಗ್ರಿ ಅಂತಾ ಹೇಳಿದ್ನ ಅಥವಾ ನಿನ್ ಬಿಟ್ಟು ಹೋಗು ಅಂತಾ ಹೇಳಿದ್ನ.? ಸರಿ ನಂದ್ ಬಿಡು ನೀನ್ಯಾರ್ ಫಾರ್(ಪರವಾಗಿ) ಅದಿ ಹೇಳ್..
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ನಾನ್ ಎಂ.ಎಲ್.ಎ ಫಾರ್ ಅದೀನಿ.
    ಬಸವರಾಜ್ ಪೊನ್ನಾಪುರ: ನಿನ್ ಎಂ.ಎಲ್.ಎ ಫಾರ್ ಅದಿ ಏನ್?
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಹೌದು ನೂರಕ್ಕೆ ನೂರು ಎಂ.ಎಲ್.ಎ ಫಾರ್ ನಾನು..
    ಬಸವರಾಜ್ ಪೊನ್ನಾಪುರ: ಓಕೆ ಅಂದ್ರೆ ಉಳಿದವ್ರು ಸಂಬಂಧ ಇಲ್ಲ ನಿಂಗೆ. ಎಂಎಲ್‍ಎ ಇದ್ರ ಸಾಕು.. ಜಿಲ್ಲಾಪಂಚಾಯಿತಿ ಅವರು ಏನ್ ಲೆಕ್ಕಕ್ಕೆ ಇಲ್ಲ ಹಂಗಾರ?
    ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಜಿಲ್ಲಾಪಂಚಾಯಿತಿ ಅವರು ಏರಿಯಾದಾಗ ಅಷ್ಟೇ. ಎಂಎಲ್‍ಎ ಎಲ್ಲಾ ಕಡೆ ಬರ್ತಾರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬೆಂಗ್ಳೂರಲ್ಲಿ ದೋಸ್ತಿ, ಹಾಸನದಲ್ಲಿ ಕುಸ್ತಿ: ಎ ಮಂಜು ಪುತ್ರ Vs ಭವಾನಿ ರೇವಣ್ಣ ವಾಕ್ಸಮರ- ವಿಡಿಯೋ ನೋಡಿ

    ಬೆಂಗ್ಳೂರಲ್ಲಿ ದೋಸ್ತಿ, ಹಾಸನದಲ್ಲಿ ಕುಸ್ತಿ: ಎ ಮಂಜು ಪುತ್ರ Vs ಭವಾನಿ ರೇವಣ್ಣ ವಾಕ್ಸಮರ- ವಿಡಿಯೋ ನೋಡಿ

    ಹಾಸನ: ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೆ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗಳ ಅಧ್ಯಕ್ಷರ ವಿಚಾರದಲ್ಲಿ ಮೈತ್ರಿ ಪಕ್ಷಗಳ ನಡುವೆ ಕುಸ್ತಿಯೇ ಏರ್ಪಟ್ಟಿದೆ.

    ಹೌದು, ಬಿಜೆಪಿಯ ಆಪರೇಷನ್ ಕಮಲದ ತಂತ್ರಕ್ಕೆ, ತಿರುಮಂತ್ರ ರೂಪಿಸುವ ಮೂಲಕ ಬೆಂಗಳೂರಿನ ಬಿಬಿಎಂಪಿ ಮೇಯರ್ ಗಾದಿಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಉಳುಸಿಕೊಳ್ಳಲು ಯಶಸ್ವಿಯಾಗಿದೆ. ಆದರೆ ಹಾಸನ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಇದೇ ಪಕ್ಷಗಳು ಕಿತ್ತಾಡಿಕೊಂಡು ಸುದ್ದಿ ಮಾಡಿಕೊಂಡಿವೆ.

    ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಸಚಿವ ಎ.ಮಂಜುರವರ ಪುತ್ರ ಮಂಥರ್ ಗೌಡ ನಡುವೆ ಭಾರೀ ವಾಕ್ಸಮರ ನಡೆದಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿಗಳಿಗೆ ನಡೆದಿರುವ ಅವಿರೋಧ ಆಯ್ಕೆಯ ಬಗ್ಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ಸಲ್ಲಿಸಿದ್ದರು. ಇದೇ ಕಾರಣಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಭವಾನಿ ರೇವಣ್ಣ ಹಾಗೂ ಮಂಥರ್ ಗೌಡ ನಡುವೆ ಮಾತಿನ ಚಕಮಕಿಯೆ ಏರ್ಪಟ್ಟಿದೆ.

    ಅಲ್ಲದೇ ಜೆಡಿಎಸ್‍ನವರು ತಮಗೆ ಇಷ್ಟ ಬಂದ ಹಾಗೇ, ಜಿಲ್ಲಾ ಪಂಚಾಯಿತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ಸಿನ ಸದಸ್ಯರಿಗೂ ಸಹ ಪ್ರಾಮುಖ್ಯತೆಯನ್ನು ನೀಡಬೇಕು. ಎಂದು ಸದಸ್ಯರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭವಾನಿ ರೇವಣ್ಣರವರು ಸರ್ಕಾರದ ವಿಚಾರ ಇಲ್ಲಿ ಬೇಡ, ಅದಕ್ಕೆ ವಿಧಾನಸೌದ ಇದೆ. ದೊಡ್ಡವರು ಸರ್ಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=i8eQw81yzTs

  • ಜಿ.ಪಂ ಸದಸ್ಯನ ಗೂಂಡಾಗಿರಿ – ನಿವೇಶನ ಹಂಚಿಕೆ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ

    ಜಿ.ಪಂ ಸದಸ್ಯನ ಗೂಂಡಾಗಿರಿ – ನಿವೇಶನ ಹಂಚಿಕೆ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ

    ತುಮಕೂರು: ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ಮತ್ತು ಅವರ ಬೆಂಬಲಿಗರು ಶ್ಯಾಮ್ ಎಂಬ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಾರಾಯಣ ಮತ್ತು ಶ್ಯಾಮ್ ತಿಪಟೂರು ಬಳಿ ಲೇಔಟ್ ನಿರ್ಮಾಣ ಮಾಡುತ್ತಿದ್ದರು. ಅದರಲ್ಲಿನ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಜಗಳ ನಡೆದಿದೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಜಿ.ಪಂ ಸದಸ್ಯ ನಾರಾಯಣ ಮತ್ತು ಅವರ ಬೆಂಬಲಿಗರು, ಶ್ಯಾಮ್‍ನನ್ನು 2 ದಿನಗಳ ಹಿಂದೆ ಕಿಡ್ಯ್ನಾಪ್ ಮಾಡಿ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಶ್ಯಾಮ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಲ್ಲೆಗೆ ಸಂಬಂಧಿಸಿದಂತೆ ಜಿ.ಪಂ ಸದಸ್ಯ ನಾರಾಯಣ ಮತ್ತು ಅವರ 8 ಜನ ಬೆಂಬಲಿಗರ ವಿರುದ್ಧ ತಿಪಟೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.