Tag: Zilla and Taluk

  • ಡಿಸೆಂಬರ್‌ನಲ್ಲಿ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಡೌಟ್

    ಡಿಸೆಂಬರ್‌ನಲ್ಲಿ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಡೌಟ್

    – ಆನ್‍ಲೈನ್ ಗ್ಯಾಂಬ್ಲಿಂಗ್ ಗೇಮ್‍ಗಳ ನಿಷೇಧ

    ಬೆಂಗಳೂರು: ಡಿಸೆಂಬರ್‌ನಲ್ಲಿ  ನಡೆಯಬೇಕಿದ್ದ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯೋದು ಅನುಮಾನ. ಕಾರಣ ಕ್ಷೇತ್ರ ಮರು ವಿಂಗಡಣೆ ಹೆಸರಲ್ಲಿ ಚುನಾವಣೆ ಮುಂದೂಡಲು ಸರ್ಕಾರ ಪ್ಲಾನ್ ಮಾಡಿದೆ.

    ಇದಕ್ಕೆ ಪೂರಕವಾಗಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನ ಮಾಡಲಾಗಿದೆ. ಚುನಾವಣೆ ಆಯೋಗಕ್ಕೆ ಇರುವ ಡೀಲಿಮಿಟೇಷನ್ ಅಧಿಕಾರ ಹಿಂಪಡೆದು ಪ್ರತ್ಯೇಕ ಆಯೋಗ ರಚನೆ ಮಾಡುವ ಬಗ್ಗೆ ಸೋಮವಾರ ಕೋರ್ಟ್ ಮುಂದೆ ಪ್ರಸ್ತಾಪ ಮಾಡಲಿದೆ. ಇದನ್ನು ಕೋರ್ಟ್ ಒಪ್ಪಿದಲ್ಲಿ ಜಿಪಂ, ತಾಪಂ ಚುನಾವಣೆ ಮುಂದಕ್ಕೆ ಹೋಗಲಿದೆ. ಇದನ್ನೂ ಓದಿ: ಗಣೇಶೋತ್ಸವಕ್ಕೆ ನಾಳೆ ಸಿಗುತ್ತಾ ಅನುಮತಿ..? – ಸಂಪುಟ ಸಭೆ ಬಳಿಕ ಸಿಎಂ ಘೋಷಣೆ ಸಾಧ್ಯತೆ

    ರಾಜ್ಯ ಚುನಾವಣಾ ಆಯೋಗಕ್ಕೂ ಕ್ಷೇತ್ರಗಳ ಪುನರ್‍ವಿಂಗಡಣೆಗೂ ಸಂಬಂಧವೇ ಇಲ್ಲ. ಯಾರೋ ಬಂದರು, ಜನಸಂಖ್ಯೆಯನ್ನು ಪರಿಗಣಿಸದೇ ಪುನರ್ ವಿಂಗಡಣೆ ಮಾಡಿದ್ರು, ಇದನ್ನು ತಪ್ಪಿಸಲು ಡಿಲಿಮಿಟೇಷನ್ ಆಯೋಗ ರಚನೆಗೆ ಸರ್ಕಾರ ಮುಂದಾಗಿದೆ. ಆಯೋಗದ ಮಟ್ಟದಲ್ಲಿ ತಕರಾರು ಪರಿಹಾರಕ್ಕೂ ಅವಕಾಶ ಇರುತ್ತದೆ ಎಂದು ಸಚಿವ ಮಾಧುಸ್ವಾಮಿ ವಿವರಣೆ ನೀಡಿದ್ದಾರೆ. ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಯತ್ನಾಳ್, ನಾನು ಭವಿಷ್ಯ ನುಡಿಯುತ್ತೇನೆ: ಕಾಶಪ್ಪನವರ್

    ಆನ್‍ಲೈನ್ ಗ್ಯಾಂಬ್ಲಿಂಗ್ ಗೇಮ್‍ಗಳ ನಿಷೇಧಕ್ಕೂ ಕ್ಯಾಬಿನೆಟ್ ನಿರ್ಧರಿಸಿದೆ. ಈ ಸಂಬಂಧ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಸೇರಿ ಹಲವು ನಿರ್ಣಯಗಳನ್ನು ಕ್ಯಾಬಿನೆಟ್ ಕೈಗೊಂಡಿದೆ. ಆದರೆ ಪೆಟ್ರೋಲ್ ಮೇಲೆ ಸೆಸ್ ಇಳಿಕೆ ಮಾಡೋ ಬಗ್ಗೆ ಇಂದಿನ ಸಂಪುಟಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ.