Tag: Zhengzhou

  • ದಟ್ಟ ಮಂಜಿನಿಂದ ಕಾಣದಂತಾದ ಚೀನಾದ ಸೇತುವೆ – ಅಪಘಾತಕ್ಕೀಡಾಗಿ ರಾಶಿ ಬಿದ್ದ ನೂರಾರು ವಾಹನ

    ದಟ್ಟ ಮಂಜಿನಿಂದ ಕಾಣದಂತಾದ ಚೀನಾದ ಸೇತುವೆ – ಅಪಘಾತಕ್ಕೀಡಾಗಿ ರಾಶಿ ಬಿದ್ದ ನೂರಾರು ವಾಹನ

    ಬೀಜಿಂಗ್: ಭಾರೀ ಮಂಜಿನಿಂದಾಗಿ (Fog) ರಸ್ತೆಗಳು ಕಾಣದೇ ಸೇತುವೆಯೊಂದರಲ್ಲಿ ನೂರಾರು ವಾಹನಗಳು ಅಪಘಾತಕ್ಕೀಡಾಗಿದ್ದಲ್ಲದೇ (Vehicles Crash) ಹತ್ತಾರು ವಾಹನಗಳು ಒಂದರಮೇಲೊಂದು ರಾಶಿ ಬಿದ್ದಿರುವ ಘಟನೆ ಚೀನಾದ (China) ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿ (Zhengzhou) ಬುಧವಾರ ನಡೆದಿರುವುದಾಗಿ ವರದಿಯಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೋಗಳು ಹರಿದಾಡಿವೆ. ಸೇತುವೆಯೊಂದರ ಮೇಲೆ ಕಾರು, ಟ್ರಕ್ ಸೇರಿದಂತೆ ಹಲವಾರು ವಾಹನಗಳು ಅಪಘಾತಕ್ಕೀಡಾಗಿ, ಒಂದಕ್ಕೊಂದು ಅಂಟಿಕೊಂಡು ರಾಶಿ ಬಿದ್ದಿವೆ. ಟ್ರಾಫಿಕ್‌ನಿಂದ ಹೊರಬರಲಾಗದ ಸ್ಥಿತಿಯಿಂದಾಗಿ ಜನರು ಬಾನೆಟ್ ಮೇಲೆ ನಿಂತುಕೊಂಡಿರುವುದು ಕಂಡುಬಂದಿದೆ.

    ನೂರಾರು ವಾಹನಗಳ ಸರಣಿ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ, ಹಲವರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಶಿ ಬಿದ್ದ ವಾಹನಗಳನ್ನು ತೆರವುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಂದಾಜಿನ ಪ್ರಕಾರ, ಸರಣಿ ಅಪಘಾತದಲ್ಲಿ 200ಕ್ಕೂ ಹೆಚ್ಚು ವಾಹನಗಳು ಒಳಗೊಂಡಿವೆ ಎನ್ನಲಾಗಿದೆ. ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ

    ಸ್ಥಳೀಯ ಅಗ್ನಿಶಾಮಕ ಇಲಾಖೆ ತಕ್ಷಣವೇ 11 ಅಗ್ನಿಶಾಮಕ ವಾಹನಗಳು ಹಾಗೂ 66 ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ. ಝೆಂಗ್‌ಝೌನ ಸೇತುವೆಯಲ್ಲಿ ಯಾವುದೇ ವಾಹನಗಳ ಸಂಚಾರವನ್ನು ಪ್ರಸ್ತುತ ನಿಷೇಧಿಸಿ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು

    Live Tv
    [brid partner=56869869 player=32851 video=960834 autoplay=true]

  • ಐಫೋನ್ ಫ್ಯಾಕ್ಟರಿಯಲ್ಲಿ ಘರ್ಷಣೆ – ಲಾಕ್‌ಡೌನ್ ವಿಸ್ತರಿಸಿದ ಚೀನಾ

    ಐಫೋನ್ ಫ್ಯಾಕ್ಟರಿಯಲ್ಲಿ ಘರ್ಷಣೆ – ಲಾಕ್‌ಡೌನ್ ವಿಸ್ತರಿಸಿದ ಚೀನಾ

    ಬೀಜಿಂಗ್: ಕಳೆದೆರಡು ದಿನದ ಹಿಂದೆ ಚೀನಾದ (China) ಅತಿದೊಡ್ಡ ಐಫೋನ್ ಕಾರ್ಖಾನೆಯಲ್ಲಿ (iPhone factory) ಕಾರ್ಮಿಕರು ಭಾರೀ ಪ್ರತಿಭಟನೆ ನಡೆಸಿದ್ದು, ಪೊಲೀಸರೊಂದಿಗೆ ತೀವ್ರವಾದ ವಾಗ್ವಾದ ನಡೆದು, ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ಇದೀಗ ಘರ್ಷಣೆಯಾದ ಬೆನ್ನಲ್ಲೇ ಐಫೋನ್ ಕಾರ್ಖಾನೆಯ ನೆಲೆಯಾಗಿರುವ ಝೆಂಗ್‌ಝೌ (Zhengzhou) ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕೋವಿಡ್ ಲಾಕ್‌ಡೌನ್ (Lockdown) ವಿಸ್ತರಿಸಲಾಗಿದೆ.

    ವರದಿ ಪ್ರಕಾರ ನಗರದ ಪ್ರಾಧಿಕಾರ ಬುಧವಾರ ಸಂಜೆ ಡೌನ್‌ಟೌನ್ ಪ್ರದೇಶದ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದ್ದು, ಶುಕ್ರವಾರದಿಂದ ಮುಂದಿನ ಮಂಗಳವಾರದ ವರೆಗೆ ತಮ್ಮ ಮನೆಯಲ್ಲಿಯೇ ಇರುವಂತೆ ಕೇಳಿಕೊಂಡಿದೆ. ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ ಈ ಆದೇಶವನ್ನು ನೀಡಲಾಗಿರುವುದಾಗಿ ತಿಳಿಸಲಾಗಿದೆ.

    ಝೆಂಗ್‌ಝೌ ನಗರದಲ್ಲಿ ಫಾಕ್ಸ್‌ಕಾನ್‌ನ ಪ್ರಮುಖ ಐಫೋನ್ ಫ್ಯಾಕ್ಟರಿಯಲ್ಲಿ ಭಾರೀ ಪ್ರತಿಭಟನೆ ನಡೆದಿರುವ ಬೆನ್ನಲ್ಲೇ ಈ ಆದೇಶವನ್ನು ಹೊರಡಿಸಲಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಪುರುಷ ಹಾಗೂ ಮಹಿಳಾ ಕಾರ್ಮಿಕರು ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿವೆ. ಇದನ್ನೂ ಓದಿ: ಸೆನ್ಸೆಕ್ಸ್‌ ಹೈಜಂಪ್‌ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ

    ಭಾರೀ ವೇತನದ ಆಫರ್ ನೀಡಿ, ಕೆಲಸಕ್ಕೆ ಸೇರಿದ ಬಳಿಕ ನಿಯಮಗಳನ್ನು ಬದಲಾಯಿಸಿ ವಂಚಿಸಲಾಗಿದೆ ಎಂದು ಆರೋಪಿಸಿ ಸಾವಿರಾರು ಕಾರ್ಮಿಕರು ನಗರದ ಫಾಕ್ಸ್ಕಾನ್ ಕಾರ್ಖಾನೆಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾಗಿ ವರದಿಯಾಗಿದೆ.

    ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲೂ ಝೆಂಗ್‌ಝೌ ನಗರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಝೆಂಗ್‌ಝೌ ದೇಶದ ಅತಿ ದೊಡ್ಡ ಐಫೋನ್ ಕಾರ್ಖಾನೆಯಿಂದ ವಲಸೆ ಕಾರ್ಮಿಕರ ಗುಂಪುಗುಂಪಾಗಿ ತಮ್ಮ ಊರುಗಳಿಗೆ ಪಲಾಯನ ಮಾಡಿದ್ದರು. ಇದನ್ನೂ ಓದಿ: ಮುಂಬೈನ ವಸತಿ ಪ್ರದೇಶಕ್ಕೆ ನುಗ್ಗಿ, ಕಟ್ಟಡದೊಳಗೆ ಓಡಾಡಿದ ಚಿರತೆ – ಮೂವರ ಮೇಲೆ ದಾಳಿ

    Live Tv
    [brid partner=56869869 player=32851 video=960834 autoplay=true]